Bengaluru: ಸರ್ಕಾರಿ ಶಾಲಾ ಕಾಲೇಜು ಮಕ್ಕಳ ಕಲಿಕಾ ಮಟ್ಟ ಹೆಚ್ಚಿಸಲು ರಾಜ್ಯ ಸರ್ಕಾರದಿಂದ ಹೊಸ ಕಾರ್ಯಕ್ರಮ: ಖಾನ್ ಅಕಾಡೆಮಿ ಸಹಯೋಗದಲ್ಲಿ ಜ್ಞಾನ ಸೇತು

Share the Article

Bengaluru: ರಾಜ್ಯ ಸರ್ಕಾರದ ರಾಜ್ಯದಲ್ಲಿರುವ ಸರ್ಕಾರಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸಲು ಗುಣಮಟ್ಟದ ಡಿಜಿಟಲ್ ಕಲಿಕೆಗಾಗಿ ಖಾನ್ ಅಕಾಡೆಮಿಯ ಸಹಾಯ ಯೋಗದಲ್ಲಿ ಜ್ಞಾನ ಸೇತು ಎಂಬ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ.

ಇದರ ಮೂಲಕ ರಾಜ್ಯದ 21,726 ಹಿರಿಯ ಪ್ರಾಥಮಿಕ ಶಾಲೆ, 4,821 ಪ್ರೌಢಶಾಲೆ ಹಾಗೂ 1,229 ಪಿಯು ಕಾಲೇಜುಗಳಲ್ಲಿ ಈಗಾಗಲೇ ಲಭ್ಯವಿರುವ ಎಲ್‌ಇಡಿ ಪ್ರೊಜೆಕ್ಟರ್‌ ಅಥವಾ ಸ್ಮಾರ್ಟ್‌ ಬೋರ್ಡ್‌ಗಳನ್ನು ಬಳಸಿಕೊಂಡು ವಾರದಲ್ಲಿ ಒಂದು ದಿನ ಡಿಜಿಟಲ್ ಕಲಿಕೆ ನೀಡಲಾಗುತ್ತದೆ.

ಲಾಭರಹಿತ ಸಂಸ್ಥೆಯಾಗಿರುವ ಖಾನ್ ಅಕಾಡೆಮಿಯ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗುವ ಮೂಲಕ ಹಾಗೂ ಮೊಬೈಲ್ ಫೋನ್ ಆ್ಯಪ್ ಮೂಲಕ ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಗಣಿತ, ಎಂಜಿನಿಯರಿಂಗ್ (ಸ್ಟೆಮ್) ಸಂಬಂಧಿಸಿದ ವಿಷಯಗಳನ್ನು ಕಲಿಯಬಹುದಾಗಿದ್ದು, ಶಿಕ್ಷಕರು ಹಾಗೂ ಉಪನ್ಯಾಸಕರು ಕೂಡ ಖಾನ್ ಅಕಾಡೆಮಿಯ ಕಾನ್‌ಮಿಗೋ ಆರ್ಟಿಫೀಷಿಯಲ್ ಇಂಟಲಿಜೆನ್ಸ್ ಬಳಸಿಕೊಂಡು ತರಬೇತಿ ಪಡೆದುಕೊಂಡು ಪಾಠ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ;High court: ಹೈಕೋರ್ಟ್ ನಿಂದ ರಾಜ್ಯ ಸರ್ಕಾರಕ್ಕೆ ನೋಟಿಸ್

Comments are closed.