Farmers: ಪಟ್ಟೆದಾರರ ಹೆಸರಿನ ಆರ್ ಟಿ ಸಿ ಇರೋ ರೈತರಿಗೆ ಶೂನ್ಯ ಬಡ್ಡಿ ಸಾಲ ನೀಡಿ – ಕೊಡಗು ಏಕೀಕರಣ ರಂಗ ಸರಕಾರಕ್ಕೆ ಅಗ್ರಹ

Farmers: ಶೂನ್ಯ ಬಡ್ಡಿ ಸಾಲ ಯೋಜನೆ ಸೌಲಭ್ಯ ಪಡೆಯಲು ಏಕ ಮಾಲೀಕತ್ವ ಆರ್.ಟಿ.ಸಿ ಅಗತ್ಯ ಪಡಿಸುತಿರುವ ಮತ್ತು ರೈತರಿಂದ 3 ತಿಂಗಳ ಒಳಗೆ ಆರ್ ಟಿ.ಸಿಯನ್ನು ಸರಿಪಡಿಸುವoತೆ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿದ್ದು. ಕಂದಾಯ ಇಲಾಖೆಯ ಕಠಿಣ ನಿಯಮಗಳು ಮತ್ತು ವಿಳಂಬ ನೀತಿಯಿಂದ ಈ ನಿರ್ದಿಷ್ಟ ಸಮಯದಲ್ಲಿ ಆರ್ ಟಿ ಸಿ ಯನ್ನು ಸರಿಪಡಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಕೊಡಗಿನಲ್ಲಿ ನಿರ್ಮಾಣವಾಗಿದೆ ಎಂದು ಕೊಡಗು ಜಿಲ್ಲಾ ಏಕೀಕರಣ ರಂಗ ಮಡಿಕೇರಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಕಳೆದೆರಡು ವರ್ಷಗಳಿಂದ ಇದನ್ನು ಸರಿ ಪಡಿಸಲು ಸಾಧ್ಯವಿಲ್ಲದೆ ಇಂದು ರೈತ 10.75 % ಬಡ್ಡಿ ಪಾವತಿ ಮಾಡುವಂತೆ ಆಗಿದೆ ಮತ್ತು ಮೃತ ಪಟ್ಟ ಪಟ್ಟೆದಾರರ ಹೆಸರು ಆರ್ ಟಿಸಿ ಇದ್ದಲ್ಲಿ ಶೂನ್ಯ ಬಡ್ಡಿ ಸಾಲ ಯೋಜನೆಯಿಂದ ಜಿಲ್ಲೆಯ ರೈತ ವಂಚಿತರಾಗಿದಾರೆ
ಎರಡು ವರ್ಷಗಳ ಹಿಂದೆ ಈ ಸಮಸ್ಯೆ ಬಗ್ಗೆ ಹಲವಾರು ದೂರು ಬಂದ ಹಿನ್ನೆಲೆ ಸರ್ಕಾರ ಪೈಲೆಟ್ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡು, ಮೊದಲ ಹಂತದಲ್ಲಿ ಮಡಿಕೇರಿಯ ಬೀಂಗೂರು ಗ್ರಾಮ, ಪೊನ್ನಂಪೇಟೆಯ ಕುಂದ ಗ್ರಾಮ, ವಿರಾಜಪೇಟೆ ತಾಲೂಕಿನ ಅಮ್ಮತಿ ಗ್ರಾಮವನ್ನು ಆಯ್ಕೆ ಮಾಡಿ ಸರ್ವೆ ಕಾರ್ಯ ನಡೆಸಿದರು. ಜಾಗದ ದುರಸ್ತಿ ಮಾಡಿ ಕಂದಾಯ ನಿಗದಿ ಮಾಡಬೇಕಾದ ಸಂದರ್ಭ ಇದೀಗ ಕಡತ ಉಪ ವಿಭಾಗ ಅಧಿಕಾರಿಗಳ ಕಚೇರಿಯಲ್ಲಿ ಇವೆ. ಜಿಲ್ಲೆಯ ಇತರೆಡೆ ಇದುವರೆಗೂ ಈ ಕಾರ್ಯ ನಡೆದಿರುವುದಿಲ್ಲ.
ಈ ಮೇಲಿನ ಸಮಸ್ಯೆ ಯನ್ನು ಶೀಘ್ರವೇ ಇತ್ಯರ್ಥ ಪಡಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಕೊಡಗು ಏಕೀಕರಣ ರಂಗ ಸರಕಾರಕೆ ಮನವಿ ಮಾಡಿಕೊಂಡಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಕೊಡಗು ಏಕೀಕರಣ ರಂಗದ ಪ್ರಮುಖರಾದ ತಮ್ಮಪೂವಯ್ಯ, ಸತೀಶ್ ಅಪ್ಪಚ್ಚು, ಪ್ರಮೋದ್ ಹಾಜರಿದ್ದರು.
Comments are closed.