Accident: ಡೀಸೆಲ್ ಟ್ಯಾಂಕರ್ ಮತ್ತು ಕಾಲೇಜು ಬಸ್ ನಡುವೆ ಡಿಕ್ಕಿ: ತಪ್ಪಿದ ಅನಾಹುತ

Share the Article

Accident: ಟೈಯರ್ ಬ್ಲಾಸ್ಟ್ ಆಗಿ ಶಾಲಾ ಬಸ್ಸಿಗೆ ಡೀಸೆಲ್ ಟ್ಯಾಂಕರ್ ಒಂದು ಡಿಕ್ಕಿ ಹೊಡೆದಿದ್ದು, ಟ್ಯಾಂಕರ್ ನಿಂದ ತೈಲ ಸೋರಿಕೆಯಾಗಿರುವ ಘಟನೆ ತುಮಕೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 48ರ ಕೋರ ಸರ್ಕಲ್ ಡಾಬಾ ಬಳಿ ನಡೆದಿದೆ.

ಎಂ ಎಸ್ ರಾಮಯ್ಯ ಕಾಲೇಜಿನ ಬಸ್ಸಿಗೆ ಡೀಸೆಲ್ ಟ್ಯಾಂಕರ್ ಡಿಕ್ಕಿ ಹೊಡೆದಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದಳ ದವರು ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ತುಮಕೂರು ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:CBSE Supplementary Exams 2025: CBSE 10, 12 ನೇ ತರಗತಿಯ ಪೂರಕ ಪರೀಕ್ಷೆಯ ದಿನಾಂಕ ಬಿಡುಗಡೆ

Comments are closed.