Viral Video : ತನ್ನ ಮೂತ್ರದಿಂದಲೇ ಕಣ್ಣುಗಳನ್ನು ತೊಳೆದುಕೊಂಡ ಮಹಿಳೆ – ವಿಡಿಯೋ ನೋಡಿ ಕ್ಯಾಕರಿಸಿ ಉಗಿದ ಜನ

Share the Article

Viral Video : ಇಂದು ಜನರು ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಲು ಏನೆಲ್ಲ ಕಸರತ್ತು ಮಾಡುತ್ತಾರೆ ಎಂದು ನೆನೆಸಿಕೊಂಡರೆ ಗಲೀಜು, ಭಯ, ಅಸಹ್ಯ ಎಲ್ಲವೂ ಒಟ್ಟಿಗೆ ಆಗಿಬಿಡುತ್ತದೆ. ಅಂತಯೇ ಇದೀಗ ಮಹಿಳೆ ಒಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಕೂಡ ಇದೇ ರೀತಿಯ ಆತಂಕವನ್ನು ಸೃಷ್ಟಿಸುತ್ತದೆ. ಯಾಕೆಂದರೆ ಆಕೆ ತನ್ನ ಮೂತ್ರದಿಂದಲೇ ಕಣ್ಣುಗಳನ್ನು ತೊಳೆದುಕೊಂಡು ವಿಡಿಯೋ ಅಪ್ಲೋಡ್ ಮಾಡಿದ್ದಾಳೆ.


ಹೌದು, ಪುಣೆಯ , ನೂಪುರ್ ಪಿಟ್ಟಿ ತನ್ನ ಮೂತ್ರ (urine)ದಿಂದ ಕಣ್ಣನ್ನು ಕ್ಲೀನ್ ಮಾಡಿದ್ದಾಳೆ. ಪ್ರತಿ ದಿನ ಬೆಳಿಗ್ಗೆ ಮೂತ್ರದಿಂದ ಕಣ್ಣನ್ನು ಕ್ಲೀನ್ ಮಾಡ್ತೇನೆ ಅಂತ ವಿಡಿಯೋದಲ್ಲಿ ಹೇಳಿದ್ದಾಳೆ. ಹೇಗೆ ಮೂತ್ರದಿಂದ ಕಣ್ಣನ್ನು ಸ್ವಚ್ಛಗೊಳಿಸ್ಬೇಕು, ಅದ್ರಿಂದ ಆಗೋ ಲಾಭ ಏನು ಅನ್ನೋದನ್ನು ಕೂಡ ನೂಪುರ್ ಪಿಟ್ಟಿ ಹೇಳಿದ್ದಾಳೆ. ಈ ವಿಡಿಯೋಕ್ಕೆ ಸಾವಿರಾರು ಲೈಕ್ಸ್, ನೂರಾರು ಕಮೆಂಟ್ ಬಂದಿದೆ.

ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಾಕಿರುವ ಮಹಿಳೆ, ನಿನ್ನೆ ತ್ರಿಫಲದಿಂದ ಕಣ್ಣನು ವಾಶ್ ಮಾಡಿದ್ದೇವೆ. ನೀವು ಮುಕ್ತ ಮನಸ್ಸಿನವರಾಗಿದ್ದರೆ ಈಗ ಹೇಳೋ ಚಿಕಿತ್ಸೆ ತ್ರಿಫಲಗಿಂತ ಒಂದು ಹೆಜ್ಜೆ ಮುಂದಿದೆ. ತಾಜಾ ಬೆಳಗಿನ ಮೂತ್ರ . ಯಸ್. ಇದು ನಿಮ್ಮ ಸ್ವಂತ ದೇಹದ ಸೃಷ್ಟಿ. ಶತಮಾನಗಳಿಂದ ನೈಸರ್ಗಿಕ ಪರಿಹಾರಗಳಲ್ಲಿ ಪ್ರಬಲವಾದ ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ ಮತ್ತು ನಿರ್ವಿಶೀಕರಣ ಏಜೆಂಟ್ ಆಗಿ ಇದನ್ನು ಬಳಸಲಾಗುತ್ತಿದೆ ಎಂದು ಬರೆದಿದ್ದಾರೆ.

ಅಲ್ಲದೆ ವಿಡಿಯೋದಲ್ಲಿ ಯೂರಿನ್ ನಿಂದ ಕಣ್ಣು ಸ್ವಚ್ಛಗೊಳಿಸಿರೋದನ್ನು ತೋರಿಸಿದ್ದಾರೆ. ಎರಡು ಸಣ್ಣ ಗ್ಲಾಸ್ ಗೆ ಯೂರಿನ್ ಹಾಕುವ ನೂಪುರ್, ಆ ನೀರಿನಲ್ಲಿ ಕಣ್ಣನ್ನು ಅದ್ದುತ್ತಾರೆ. ಕಣ್ಣಿನ ರೆಪ್ಪೆಗಳನ್ನು ಮೇಲೆ ಕೆಳಗೆ ಮಾಡ್ತಾರೆ. ಕಣ್ಣಿನ ಒಳಗೆ ಮೂತ್ರ ಹೋಗ್ಬೇಕು ಎನ್ನುವ ನೂಪುರ್, ನಂತ್ರ ಕಣ್ಣನ್ನು ಶುದ್ಧ ಟವೆಲ್ ನಿಂದ ಒರೆಸಿಕೊಳ್ತಾರೆ. ಆ ನಂತ್ರ ಕೈನಿಂದ ಕಣ್ಣನ್ನು ನಿಧಾನವಾಗಿ ಪ್ರೆಸ್ ಮಾಡ್ತಾರೆ. ಈ ವಿಡಿಯೋ ಮಿಲಿಯನ್ಸ್ ಗಟ್ಟಲೆ ವೀವ್ಸ್ ಪಡೆದಿದ್ದು, ಇದನ್ನು ನೋಡಿದ ಜನ ಕ್ಯಾಕರೆಸಿ ಉಗಿದಿದ್ದಾರೆ.

ಇನ್ನು ಮೂತ್ರ ನಿಮ್ಮ ಕಣ್ಣಿಗೆ ಹೋದ್ರೆ ಕಣ್ಣಿಗೆ ಸೋಂಕು ತಗಲುವ ಅಪಾಯವಿದೆ. ನೀವು ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದರೆ ಕಣ್ಣಿಗೆ ಸೋಂಕಿನ ಅಪಾಯ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ:Mysuru: ಇನ್ಮುಂದೆ ಮೈಸೂರು ಚಾಮುಂಡಿ ಬೆಟ್ಟದಲ್ಲಿ ಫೋಟೋ ವಿಡಿಯೋ ತೆಗೆಯುವಂತಿಲ್ಲ:

Comments are closed.