Mysore : ಬೆಳಗ್ಗೆ 5 ರಿಂದ 10 ಗಂಟೆವರೆಗೆ ಮಾತ್ರ ಚಾಮುಂಡಿ ಬೆಟ್ಟದಲ್ಲಿ VIP ದರ್ಶನಕ್ಕೆ ಅವಕಾಶ – ಜಿಲ್ಲಾಡಳಿತ ಹೊಸ ರೂಲ್ಸ್

Mysore : ಚಾಮುಂಡಿ ಬೆಟ್ಟದಲ್ಲಿ ಇನ್ನು ಮುಂದೆ ನಾಡ ದೇವಿ ಚಾಮುಂಡೇಶ್ವರಿಯ ವಿಐಪಿ ದರ್ಶನಕ್ಕೆ ಸಮಯವನ್ನು ನಿಗದಿ ಮಾಡಿ ಜಿಲ್ಲಾಡಳಿತವು ಆದೇಶ ಹೊರಡಿಸಿದೆ.
ನಾಡ ದೇವಿ ಚಾಮುಂಡೇಶ್ವರಿ ದರ್ಶನ ಪಡೆಯಲು ರಾಜಕಾರಣಿಗಳಿಂದ ಹಿಡಿದು ಸಿನಿಮಾ ನಟ, ನಟಿಯರು, ಉದ್ಯಮಿಗಳು ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಇವರಿಗೆ ವಿಐಪಿ ದರ್ಶನದ ವ್ಯವಸ್ಥೆ ಮಾಡಬೇಕಾಗುತ್ತದೆ. ಹೀಗಾದಾಗ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕೆ ಕಾಯುವ ಭಕ್ತರಿಗೆ ಅಡಚಣೆ ಉಂಟಾಗುತ್ತದೆ ಹೀಗಾಗಿ ಜಿಲ್ಲಾಡಳಿತವು ಇದಕ್ಕೆ ಈ ಸಮಸ್ಯೆಯನ್ನು ತಪ್ಪಿಸಲು ಹೊಸ ಪರಿಹಾರವನ್ನು ಕಂಡುಕೊಂಡಿದೆ.
ಈ ಕುರಿತು ಜಿಲ್ಲಾಡಳಿತವು ಮಾಹಿತಿ ಹಂಚಿಕೊಂಡಿದ್ದು ಬೆಳಗ್ಗೆ 5 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ವಿಐಪಿ ದರ್ಶನಕ್ಕೆ ಅವಕಾಶವಿರುತ್ತದೆ. ಉಳಿದ ಸಮಯದಲ್ಲಿ ಯಾರಾದರೂ ವಿಐಪಿ ಗಳು ದರ್ಶನಕ್ಕೆ ಬಂದರೆ ಅವರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯಬೇಕು ಎಂದು ಮೈಸೂರು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ;SSC: SSLC ಆದವರಿಗೆ ಇಲ್ಲಿದೆ ಉದ್ಯೋಗವಕಾಶ: SSC MTS ಹುದ್ದೆಗೆ ಅರ್ಜಿ ಆಹ್ವಾನ
Comments are closed.