Mangalore: ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಬ್ಯಾಂಕ್‌ ಉದ್ಯೋಗಿ

Share the Article

Mangalore: ನಿವೃತ್ತ ಬ್ಯಾಂಕ್‌ ಉದ್ಯೋಗಿಯೊಬ್ಬರು ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಿವಿಎಸ್‌ ವೃತ್ತದ ಬಳಿಯ ರಾಮಭವನ ಕಾಂಪ್ಲೆಕ್ಸ್‌ ನೆಲ ಮಹಡಿಯ ಕೆನರಾ ಬ್ಯಾಂಕ್‌ ಸ್ಟೋರ್‌ ರೂಂ ನಲ್ಲಿ ನಡೆದಿದೆ.

ಗಿರಿಧರ್‌ ಯಾದವ್‌ (61) ಮೃತ ವ್ಯಕ್ತಿ. ಇವರು ಅಳಕೆ ನಿವಾಸಿ.

ಕೊಡಿಯಾಲ್‌ ಬೈಲ್‌ ಶಾಖೆಯಲ್ಲಿ 40 ವರ್ಷ ಕೆಲಸ ಮಾಡಿದ್ದ ಇವರು ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಆದರೂ ಇವರಿಗೆ ಬ್ಯಾಂಕ್‌ ಮೇಲೆ ಪ್ರೀತಿ ಇತ್ತು. ಹಾಗಾಗಿ ಬಂದು ಹೋಗಿ ಮಾಡುತ್ತಿದ್ದರು. ನಿನ್ನೆ ಸಂಜೆ ರಾಮಭವನ ಕಾಂಪ್ಲೆಕ್ಸ್‌ ಬ್ಯಾಂಕ್‌ ಕಚೇರಿಗೆ ಬಂದಿದ್ದ ಇವರು ಮನೆಗೆ ವಾಪಾಸು ಹೋಗಿರಲಿಲ್ಲ. ಹಾಗಾಗಿ ಪತ್ನಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ಇಂದು ಬೆಳಗ್ಗೆ ಬ್ಯಾಂಕ್‌ ಬಾಗಿಲು ತೆರೆದಾಗ ಬ್ಯಾಂಕಿನ ಸ್ಟೋರ್‌ ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಳಿಸರು ಸ್ಥಳಕ್ಕೆ ಬಂದಿದ್ದು ತನಿಖೆ ನಡೆಸುತ್ತಿದ್ದಾರೆ.

Suraj Revanna: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ – ಸೂರಜ್ ರೇವಣ್ಣಗೆ ರಿಲೀಫ್ – ಬಿ ರಿಪೋರ್ಟ್ ಸಲ್ಲಿಸಿದ ಸಿಐಡಿ

Comments are closed.