Indo-Pak: ಭಾರತದ ಬಜೆಟ್‌ ಮುಂದೆ ನಮ್ಮದು ಏನೂ ಅಲ್ಲ: ಸಂಸತ್ತಿನಲ್ಲಿ ಭಾರತವನ್ನು ಹೊಗಳಿದ ಪಾಕ್ ಸಂಸದ

Share the Article

Indo-Pak: ಭಾರತದೊಂದಿಗಿನ ದ್ವೇಷದ ನಡುವೆಯೂ, ನರೇಂದ್ರ ಮೋದಿ ಸರ್ಕಾರವನ್ನು ಪಾಕಿಸ್ತಾನ ಸಂಸತ್ತಿನಲ್ಲಿ ಸಂಸದ ಗೌಹರ್ ಅಲಿ ಖಾನ್ ಭಾರತ ಸರ್ಕಾರವನ್ನು ಹೊಗಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಸಂಸತ್ತಿನಲ್ಲಿ ತೀಕ್ಷವಾದ ಭಾಷಣದಲ್ಲಿ ಸಂಸದ ಗೋಹರ್ ಅಲಿ ಖಾನ್, ತಮ್ಮದೇ ಸರ್ಕಾರದ ಬಜೆಟ್ ನೀತಿಗಳನ್ನು ಟೀಕಿಸಿದರು ಮತ್ತು ಭಾರತದ ಯೋಜನೆಗಳು ಮತ್ತು ಹೂಡಿಕೆಗಳನ್ನು ಉದಾಹರಣೆಯಾಗಿ ಪ್ರಸ್ತುತಪಡಿಸಿದರು.

“ಭಾರತ ನಮ್ಮ ಶತ್ರುವಾಗಿರಬಹುದು, ಆದರೆ ಕೆಲವು ಸತ್ಯಗಳನ್ನು ಒಪ್ಪಿಕೊಳ್ಳಬೇಕು. “ಭಾರತ 10,000 ವೈದ್ಯಕೀಯ ಸೀಟುಗಳನ್ನು ಘೋಷಿಸಿದೆ. ಆದರೆ ಪಾಕಿಸ್ತಾನ ಆರೋಗ್ಯ ಬಜೆಟ್ ಅನ್ನು 54 ಬಿಲಿಯನ್‌ನಿಂದ 46 ಬಿಲಿಯನ್‌ಗೆ ಇಳಿಸಿದೆ. ಭಾರತ Al ಸಂಶೋಧನೆಗಾಗಿ ₹500 ಕೋಟಿ ಉಳಿಸಿಕೊಂಡಿದೆ. ಆದರೆ, ಪಾಕಿಸ್ತಾನದ ಬಜೆಟ್‌ನಲ್ಲಿ ಅದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ” ಎಂದು ಅವರು ಹೇಳಿದ್ದಾರೆ.

ಭಾರತದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಉದಾಹರಣೆಯನ್ನು ಉಲ್ಲೇಖಿಸಿ, ಗೋಹರ್ ಅಲಿ ಖಾನ್, “ಪಾಕಿಸ್ತಾನದ ಒಟ್ಟು ಬಜೆಟ್ $62 ಬಿಲಿಯನ್, ಆದರೆ ಭಾರತದಲ್ಲಿ, ಕೇವಲ ಉತ್ತರ ಪ್ರದೇಶದ ಬಜೆಟ್ $97 ಬಿಲಿಯನ್. ನಾವು ಎಲ್ಲಿದ್ದೇವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದರು.

ಇದನ್ನೂ ಓದಿ:A Young Man Married Widow: ಅಂತಾರಾಷ್ಟ್ರೀಯ ವಿಧವೆಯರ ದಿನದಂದೇ ವಿಧವೆಗೆ ಬಾಳು ಕೊಟ್ಟ ಯುವಕ

Comments are closed.