

Gujarath : ಮುಂಗಾರು ಆರಂಭವಾಗಿ ದೇಶದಾದ್ಯಂತ ಮಳೆ ಆರ್ಭಟ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ಪ್ರವಾಸಿ ತಾಣಗಳು ಹಸಿರುಟ್ಟು ಹಾಗೂ ಮಂಜಿನಿಂದ ಆವರಿಸಿಕೊಂಡು ಕಂಗೊಳಿಸುತ್ತಿವೆ. ಇಂಥ ಸಮಯದಲ್ಲಿ ಪ್ರೇಮಿಗಳಿಗೆ ಟ್ರಿಪ್ ಹೋಗುವುದು ಎಂದರೆ ಒಂದು ಸಂತಸ. ಕೆಲವರು ಕದ್ದು ಮುಚ್ಚಿ ಪ್ರೀತಿಸುವವರು ಕೂಡ ಇದೇ ಸಮಯವನ್ನು ಆರಿಸಿಕೊಂಡು ತಮ್ಮ ಪ್ರೇಮಿಗಳನ್ನು ಭೇಟಿಯಾಗಲು ಬೇರೆ ಬೇರೆ ಸ್ಥಳಗಳಿಗೆ ತೆರಳುತ್ತಾರೆ. ಅಂತೆಯೇ ಇಲ್ಲೊಬ್ಬ ಪ್ರೇಮಿ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಆರಿಸಿಕೊಂಡ ಸ್ಥಳವೇ ಆತನಿಗೆ ಮಾರಕವಾಗಿ ಪರಿಣಮಿಸಿದೆ.
ತನ್ನ ಪ್ರೇಯಸಿ ಹಾಗೂ ತಾನು ಭೇಟಿಯಾಗುವುದನ್ನು ಪ್ರಪಂಚದ ಕಣ್ಣುಗಳಿಂದ ಮರೆಮಾಡಲು ಬಯಸಿದ ಭೇಟಿ ಈಗ ಎಲ್ಲರ ಕಣ್ಣ ಮುಂದೆ ಬಯಲಾದಂತ ವಿಚಿತ್ರ ಹಾಗೂ ನಗುತರಿಸುವಂತಹ ಒಂದು ಘಟನೆ ಗುಜರಾತ್ ನ ಬರೂಜ್ ನಲ್ಲಿ ನಡೆದಿದೆ. ಈ ಕುರಿತಾದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಂದಹಾಗೆ ನರ್ಮದಾ ನದಿಯ ಸೇತುವೆಯ ಕೆಳಗಿನ ಕಂಬದ ಮೇಲೆ ಪ್ರೇಮಿಗಳಿಬ್ಬರು ಕುಳಿತಿದ್ದರು. ಸ್ಥಳೀಯ ಜನರು ಅವರಿಗೆ ಹಲವಾರು ಬಾರಿ ಎಚ್ಚರಿಕೆ ನೀಡಿದರು, ಆದರೆ ಅವರು ಕೇಳಲಿಲ್ಲ. ಶನಿವಾರ ಸಂಜೆ ನಡೆದ ಈ ಘಟನೆಯಲ್ಲಿ, ನರ್ಮದಾ ನದಿಯ ನೀರಿನ ಮಟ್ಟ ನಿಧಾನವಾಗಿ ಏರಲು ಪ್ರಾರಂಭಿಸಿತು. ಪ್ರೇಮಿಗಳು ಕುಳಿತಿದ್ದ ಸೇತುವೆ ಇದ್ದಕ್ಕಿದ್ದಂತೆ ನೀರಿನಿಂದ ತುಂಬಿತು. ನೀರಿನ ವೇಗದಿಂದಾಗಿ ಹೊರಬರುವ ದಾರಿ ನಿರ್ಬಂಧಿಸಲಾಯಿತು.
ಈಗ ಅಲೆಗಳ ನಡುವೆ ಸಿಲುಕಿದ್ದ ಜೋಡಿ ಸಹಾಯಕ್ಕಾಗಿ ಗಂಟೆಗಟ್ಟಲೆ ಕಾಯಬೇಕಾಯಿತು. ಸ್ವಲ್ಪ ಸಮಯದ ನಂತರ, ನೂರಾರು ಜನರ ಗುಂಪು ನದಿಯ ದಡದಲ್ಲಿ ಜಮಾಯಿಸಿತು. ನದಿಯ ಮಧ್ಯದಲ್ಲಿ ಅವರಿಬ್ಬರನ್ನೂ ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು. ನದಿಯ ನೀರಿನ ಮಟ್ಟ ಇನ್ನೂ ಏರುತ್ತಿತ್ತು. ನಂತರ ದೋಣಿಯ ಸಹಾಯದಿಂದ ಇಬ್ಬರನ್ನೂ ಸುರಕ್ಷಿತವಾಗಿ ರಕ್ಷಿಸಲಾಯಿತು. ಆದರೆ ಈ ಇಡೀ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
https://www.instagram.com/reel/DLNVoU5yzO-/?igsh=MTdjMnE1am5vd2hsMw==
ಇದನ್ನೂ ಓದಿ: Kodagu: ಕೊಡಗು: ಇಂದು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ













