Home News Puttur: ಪುತ್ತೂರು: ರಾಜ್ಯ ಮಟ್ಟದ ಪರಿಸರೋತ್ಸವ ಕವಿಗೋಷ್ಠಿಗೆ ವಿವೇಕಾನಂದ ಕಾಲೇಜಿನ ನಾರಾಯಣ ಕುಂಬ್ರ ಆಯ್ಕೆ

Puttur: ಪುತ್ತೂರು: ರಾಜ್ಯ ಮಟ್ಟದ ಪರಿಸರೋತ್ಸವ ಕವಿಗೋಷ್ಠಿಗೆ ವಿವೇಕಾನಂದ ಕಾಲೇಜಿನ ನಾರಾಯಣ ಕುಂಬ್ರ ಆಯ್ಕೆ

Hindu neighbor gifts plot of land

Hindu neighbour gifts land to Muslim journalist

Puttur:ಕಪ್ಪತ್ತಗಿರಿ ಫೌಂಡೇಶನ್ (ರಿ) ಗದಗ ಕಳಸಾ ಪುರ ಕಪ್ಪತ್ತಗಿರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ರಾಜ್ಯ ಘಟಕ ಕಳಸಾಪುರ ಗದಗ ಜಿಲ್ಲೆ ಇದರ ವತಿಯಿಂದ ಪರಿಸರೋತ್ಸವ ರಾಜ್ಯ ಮಟ್ಟದ ಕವಿಗೋಷ್ಠಿಗೆ ಪುತ್ತೂರು ವಿವೇಕಾನಂದ ಕಾಲೇಜಿನ ಶ್ರೀ ನಾರಾಯಣ ಕುಂಬ್ರ ಆಯ್ಕೆಯಾಗಿದ್ದಾರೆ.

ಇವರು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ನಡೆಸುತ್ತಿರುವ ಗ್ರಾಮ ಸಾಹಿತ್ಯ ಸಂಭ್ರಮ ಸಂಚಾಲಕರಾಗಿದ್ದು ಈಗಾಗಲೇ 21 ಸರಣಿ ಕಾರ್ಯಕ್ರಮ ನಡೆಸಿ 2350 ವಿದ್ಯಾರ್ಥಿಗಳಿಗೆ ವಿವಿಧ ಗೋಷ್ಠಿಗಳಲ್ಲಿ ಅವಕಾಶ ಕಲ್ಪಿಸಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಇವರ ಎರಡನೇ ಕವನ ಸಂಕಲನ ಹನಿದನಿ… ಇದು ಬರಹಗಳ ಮಣಿ ಬಿಡುಗಡೆಗೊಂಡಿರುತ್ತದೆ. ಮುಂಡರಗಿ ಸಾಹಿತಿ ಶ್ರೀ ನಿಂಗೂ ಸೋಲಗಿ ಇವರ ಅಧ್ಯಕ್ಷತೆಯಲ್ಲಿ ಇದೇ ಭಾನುವಾರ 29ರಂದು ಸುಕ್ಷೇತ್ರ ಕಪ್ಪತ್ತಗುಡ್ಡ ಕಪ್ಪತ್ತ ಮಲ್ಲೇಶ್ವರ ದೈವೀವನ ಇಲ್ಲಿ ಕವಿಗೋಷ್ಠಿ ನಡೆಯಲಿದೆಯೆಂದು ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀಮತಿ ಚಂದ್ರಕಲಾ ಎಂ ಇಟಗಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:Fire Accident: ಕೆಮಿಕಲ್ಸ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ: ನಾಲ್ಕು ಮಂದಿ ಸಜೀವ ದಹನ