Madenuru Manu: ಶಿವರಾಜ್ ಕುಮಾರ್ ಬಳಿ ಕ್ಷಮೆ ಕೇಳಲು ಮನೆಗೆ ತೆರಳಿದ ಮಡೆನೂರು ಮನು – ಗೇಟ್ ಕೂಡ ತೆರೆಯದೆ ವಾಪಸ್ ಕಳುಹಿಸಿದ ಶಿವಣ್ಣ

Share the Article

Madenuru Manu: ಮಡೆನೂರು ಮನು ಅವರ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದ ಕಾರಣ ಅವರನ್ನು ಬಂಧಿಸಿ ಜೈಲಿಗೆ ಹಾಕಲಾಯಿತು. ಇದೀಗ ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಈ ಮೊದಲು ಅವರು ಸ್ಟಾರ್ ಹೀರೋಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಆಡಿಯೋನ ಈ ಸಂದರ್ಭದಲ್ಲಿ ವೈರಲ್ ಮಾಡಲಾಗಿತ್ತು. ಆರಂಭದಲ್ಲಿ ಇದು ನನ್ನ ಆಡಿಯೋ ಅಲ್ಲ ಎಂದು ವಾದಿಸುತ್ತಿದ್ದ ಮನು ಅವರು ಈಗ ಮನು ಅದು ತಮ್ಮದೇ ಆಡಿಯೋ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಇದೀಗ ಪ್ರತಿಯೊಬ್ಬ ನಾಯಕ ನಟರ ಬಳಿಯು ತೆರಳಿಯವರ ಕ್ಷಮೆ ಕೇಳುತ್ತಿದ್ದಾರೆ.

ಇತ್ತೀಚಿಗಷ್ಟೇ ದ್ರುವ ಸರ್ಜಾ ಅವರಿಗೆ ಫೋನಿನ ಮೂಲಕ ಕ್ಷಮೆ ಕೇಳಿದ್ದ ಮಡೆನೂರು ಮನು ಅವರು ಮೊನ್ನೆ ತಾನೆ ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘದ ರಾಜ್ಯ ಒಕ್ಕೂಟದ ಅಧ್ಯಕ್ಷರ ಬಳಿ ತೆರಳಿ ವಿಡಿಯೋ ಮೂಲಕ ಕ್ಷಮೆಯಾಚಿಸಿದರು. ಇದೀಗ ಶಿವರಾಜ್ ಕುಮಾರ್ ಅವರ ಕ್ಷಮೆ ಕೇಳಲು ಮಡೆನೂರು ಮನು ಅವರು ಶಿವಣ್ಣನ ಮನೆಗೆ ತೆರಳಿದ್ದರು. ಆದರೆ ಶಿವಣ್ಣ ಅವರನ್ನು ಮನೆಯೊಳಗೆ ಬಿಟ್ಟುಕೊಳ್ಳದೆ ವಾಪಸ್ ಕಳುಹಿಸಿದ್ದಾರೆ ಎಂಬ ಮಾಹಿತಿ ದೊರಕಿದೆ.

ಹೌದು, ಶಿವರಾಜ್ ಕುಮಾರ್ ಇನ್ನೊಂದು ಆರು ವರ್ಷದಲ್ಲಿ ಸಾಯುತ್ತಾರೆ ಎಂದು ಹೇಳಿದ ಮಡೆನೂರು ಮನು ಅವರು ಇದೀಗ ನೇರವಾಗಿ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಕ್ಷಮೆ ಕೇಳಲು ಅವರ ಮನೆಗೆ ತೆರಳಿದ್ದರು. ಆದರೆ ಶಿವರಾಜಕುಮಾರ್ ಅವರು ಮನೆಯೊಳಗೆ ಬಿಟ್ಟುಕೊಳ್ಳುವುದು ಬಿಡಿ ಗೇಟ್ ಕೂಡ ತೆರೆಯದೆ ಅವರನ್ನು ವಾಪಸ್ ಕಳುಹಿಸಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ.

ಈ ಮೂಲಕ ನಡೆನೂರು ಮನು ಅವರ ಕನಸು ಭಗ್ನವಾಗಿದೆ. ಅವರು ಶಿವರಾಜ್ ಕುಮಾರ್ ಅವರ ಮನೆಎದುರು ತುಂಬಾ ಟೆನ್ಶನ್ ಇಂದ ಓಡಾಡುತ್ತಿರುವ ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ಇದನ್ನೂ ಓದಿ:Haveri: ಶಿಗ್ಗಾವಿಯ ಗುತ್ತಿಗೆದಾರನ ಹತ್ಯೆ: ಆರೋಪಿ ಮನೆಗೆ ಬೆಂಕಿ ಹಚ್ಚಿದ ಕುಟುಂಬಸ್ಥರು

Comments are closed.