Anant Kumar Hegde: ಹಲ್ಲೆ ಪ್ರಕರಣ: ಅನಂತ್‌ಕುಮಾರ್‌ ಹೆಗಡೆ ಗನ್‌ಮ್ಯಾನ್‌ ಅಮಾನತು

Share the Article

Anant Kumar Hegde: ನೆಲಮಂಗಲ ರೋಡ್‌ ರೇಜ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಅನಂತಕುಮಾರ್‌ ಹೆಗಡೆ ಗನ್‌ ಮ್ಯಾನ್‌ ಶ್ರೀಧರ್‌ ಅವರನ್ನು ಕರ್ತವ್ಯದಿಂದ ಅಮಾನತು ಮಾಡಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ್‌ ಆದೇಶ ಹೊರಡಿಸಿದ್ದಾರೆ.

ಕಾರೊಂದು ಓವರ್‌ಟೇಕ್‌ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರು ನಿಲ್ಲಿಸಿ, ಚಾಲಕ ಮತ್ತು ಅದರಲ್ಲಿದ್ದವರಿಗೆ ಹಲ್ಲೆ ಮಾಡಲಾಗಿತ್ತು. ಈ ಕುರಿತು ದಾಬಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ಈ ಬೆನ್ನಲ್ಲೇ ಡಿ.ಆರ್‌.ಪೊಲೀಸ್‌ ವಿಭಾಗದಲ್ಲಿ ಗಣ್ಯ ವ್ಯಕ್ತಿಗಳಿಗೆ ಗನ್‌ಮ್ಯಾನ್‌ ಆಗಿ ಐದು ವರ್ಷಕ್ಕಿಂತ ಹೆಚ್ಚು ಸೇವೆ ಮಾಡುತ್ತಿರುವ ಪೊಲೀಸ್‌ ಸಿಬ್ಬಂದಿಗಳಿಗೆ ವರ್ಗಾವಣೆ ಆದೇಶ ಮಾಡಲಾಗಿರುವ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ್‌ ಆದೇಶಿಸಿದ್ದಾರೆ.

ಇದನ್ನೂ ಓದಿ:Intresting : ಗಂಡು ಮಗು ಆಗಲು ಸೊಸೆಗೆ ಮಾತ್ರೆ ಕೊಡಿ ಎಂದ ಅತ್ತೆ – ತಕ್ಷಣ ಡಾಕ್ಟರ್ ಮಾಡಿದ್ದೇನು ಗೊತ್ತಾ?

Comments are closed.