Ullala: ಓದಿನ ಒತ್ತಡ, ತಲೆನೋವು: ಆತ್ಮಹತ್ಯೆ ಮಾಡಿಕೊಂಡ ಕಾಲೇಜು ವಿದ್ಯಾರ್ಥಿನಿ, ಡೆತ್‌ನೋಟ್‌ ಪತ್ತೆ

Share the Article

Ullala: ಓದಿನ ಒತ್ತಡದಿಂದ ತಲೆನೋವಿನಿಂದ ಬಳಲುತ್ತಿದ್ದ ಬಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ತಲಪಾಡಿ ದೇವಿಪುರದ ಶಾರದಾ ವಿದ್ಯಾಲಯದ ಆವರಣದ ಸಿಬ್ಬಂದಿ ವಸತಿ ಗೃಹದಲ್ಲಿ ನಡೆದಿದೆ.

ಮಂಗಳೂರು ಬೆಂದೂರ್‌ ವೆಲ್‌ ಸೈಂಟ್‌ ಆಗ್ನೆಸ್‌ ಕಾಲೇಜಿನಲ್ಲಿ ದ್ವಿತೀಯ ಸಾಲಿನ ಬಿಎ ವ್ಯಾಸಂಗ ನಡೆಸುತ್ತಿದ್ದ ವಿದ್ಯಾರ್ಥಿನಿ ಶ್ರೇಯಾ (19) ಆತ್ಮಹತ್ಯೆ ಮಾಡಿಕೊಂಡಾಕೆ. ಶ್ರೇಯಾ ತಾಯಿ ಪುಷ್ಪಲತಾ ಅವರು ದೇವಿಪುರದ ಶಾರದಾ ವಿದ್ಯಾಲಯದಲ್ಲಿ ಅಟೆಂಡರ್‌ ಕೆಲಸ ಮಾಡುತ್ತಿದ್ದು, ಸಂಸ್ಥೆಯ ವಸತಿ ಗೃಹದಲ್ಲಿ ಗಂಡ ಮಕ್ಕಳ ಜೊತೆ ನೆಲೆಸಿದ್ದರು.

ಸೋಮವಾರ ಎಂದಿನಂತೆ ಬೆಳಗ್ಗೆ ಕಾಲೇಜಿಗೆ ಹೋಗಿದ್ದ ಶ್ರೇಯಾ, ಸಂಜೆ ಶ್ರೇಯಾ ತಂಗಿ ಶಾಲೆ ಮುಗಿಸಿ ಮನೆಗೆ ಬಂದು ನೋಡಿದಾಗ ಒಳಗೆ ಮನೆಯ ಬೆಡ್‌ ರೂಂ ನಲ್ಲಿ ಶಾಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಡೆತ್‌ನೋಟ್‌ ಪತ್ತೆಯಾಗಿದ್ದು, ಓದಿನಲ್ಲಿ ಕಳೆದ ಎರಡು ತಿಂಗಳಿನಿಂದ ವಿಪರೀತ ಒತ್ತಡ ಎದುರಿಸುತ್ತಿದ್ದು, ತಲೆ ನೋವಿನಿಂದ ಬಳಲುತ್ತಿದ್ದೇನೆ ಎಂದು ಬರೆಯಲಾಗಿದೆ. ಇತ್ತೀಚೆಗೆ ಬರೆದ ಪರೀಕ್ಷೆಯಲ್ಲಿ ಕೂಡಾ ಈಕೆ ಒಂದು ವಿಷಯದಲ್ಲಿ ಫೇಲ್‌ ಆಗಿದ್ದಾಗಿ ವರದಿಯಾಗಿದೆ.

ಉಳ್ಳಾಲ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನು ಓದಿ:Karnataka-Kerala: ಕರ್ನಾಟಕ- ಕೇರಳ ಸಂಪರ್ಕಿಸುವ ಕುಟ್ಟ ತೋಲ್ ಪಟ್ಟಿ ರಸ್ತೆಯ ಅವ್ಯವಸ್ಥೆ – ರಸ್ತೆ ದುರಸ್ತಿಗೊಳಿಸದೆ ಸಾರ್ವಜನಿಕರ ಪರದಾಟ

Comments are closed.