Puttur: ಪುತ್ತೂರಿನಿಂದ ಮಂಗಳೂರಿಗೆ ನಾನ್ ಸ್ಟಾಪ್ ಸರಕಾರಿ ಬಸ್ ಸಂಚಾರ ಆರಂಭ: ಅಶೋಕ್‌ ರೈ

Share the Article

Puttur: ಸೋಮವಾರ ಶಾಸಕರ ಕಚೇರಿಯಲ್ಲಿ ನಡೆದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಸಭೆಯಲ್ಲಿ, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಬಸ್ ಸಂಚಾರದಲ್ಲಿ ಇರುವ ಲೋಪ ದೋಷಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಮಳೆಗಾಲ ಮತ್ತು ಶಾಲಾ ಪ್ರಾರಂಭದ ದಿನಗಳಾಗಿರುವ ಕಾರಣ ಶಾಲಾ ಮಕ್ಕಳಿಗೆ 2 ಇಲ್ಲದೆ ಯಾವುದೇ ತೊಂದರೆಗಳುಂಟಾದಲ್ಲಿ, ಬಸ್ ಕೊರತೆಯಾದಲ್ಲಿ ತನ್ನ ಗಮನಕ್ಕೆ ತರಬೇಕು ಎಂದು ಶಾಸಕರು ತಿಳಿಸಿದರು.

ಜೊತೆಗೆ ಪುತ್ತೂರಿನಿಂದ ( Puttur) ಮಂಗಳೂರಿನ ಸ್ಟೇಟ್ ಬ್ಯಾಂಕ್‌ಗೆ ನಾನ್ ಸ್ಟಾಪ್ ಎಕ್ಸ್‌ಪ್ರೆಸ್ ಬಸ್ ಸೇವೆ ಶೀಘ್ರ ಆರಂಭವಾಗಲಿದೆ. ಪ್ರಾರಂಭದಲ್ಲಿ 6 ಬಸ್ಸುಗಳು ಸಂಚಾರ ಆರಂಭಿಸಲಿದೆ. ಪುತ್ತೂರು ಬಸ್ ನಿಲ್ದಾಣದಿಂದ ಹೊರಡುವ ಬಸ್ಸು ಎಲ್ಲೂ ನಿಲುಗಡೆಯಾಗದೆ ನೇರವಾಗಿ ಸ್ಟೇಟ್ ಬ್ಯಾಂಕ್‌ ನಿಲ್ದಾಣದಲ್ಲೇ ನಿಲುಗಡೆಯಾಗಲಿದೆ. ಈಗ ಇರುವ ಬಸ್ಸು ಅಲ್ಲಲ್ಲಿ ನಿಲುಗಡೆ ಇರುವ ಕಾರಣ ನೇರವಾಗಿ ಮಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಬಸ್ಸು ತಲುಪುವಾಗ ತಡವಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಬಳಿಕ, ಸಾರ್ವಜನಿಕರ ಅನುಕೂಲಕ್ಕೆ ಹೊಸ ಬಸ್‌ ಸೇವೆಯನ್ನು ಪ್ರಾರಂಭಮಾಡಲಾಗುವುದು ಎಂದು ಶಾಸಕರು ತಿಳಿಸಿದರು.

ಹೊಸ ಎಕ್ಸ್‌ಪ್ರೆಸ್ ಪುತ್ತೂರಿನಿಂದ ಹೊರಟು ಒಂದು ಗಂಟೆಯೊಳಗೆ ಮಂಗಳೂರು ತಲುಪಲಿದೆ. ಇದಕ್ಕಾಗಿ ಹೊಸ ಬಸ್ಸುಗಳು ಬರಲಿದೆ ಎಂದು ಶಾಸಕರು ತಿಳಿಸಿದರು. ಪುತ್ತೂರಿಗೆ ಹೊಸದಾಗಿ 326 ಮಂದಿ ಚಾಲಕ ಕಂ ನಿರ್ವಾಹಕರನ್ನು ನೇಮಕ ಮಾಡಲಾಗಿದೆ. 500 ಮಂದಿ ಚಾಲಕ ಕಂ ನಿರ್ವಾಹಕರನ್ನು ನೇಮಕ ಮಾಡುವಂತೆ ಸರಕಾರಕ್ಕೆ ಬೇಡಿಕೆ ಇಟ್ಟಿದ್ದು ಈ ಪೈಕಿ ಮೊದಲ ಹಂತದಲ್ಲಿ 326 ಮಂದಿಯನ್ನು ಪುತ್ತೂರಿಗೆ ನೇಮಕ ಮಾಡಲಾಗಿದೆ. ಈ ಮೂಲಕ ಕೊರತೆಯನ್ನು ನೀಗಿಸಲಾಗಿದೆ. ಬಸ್ಸುಗಳ ಸಂಖ್ಯೆಯಲ್ಲಿ ಯಾವುದೇ ಕೊರತೆಯಿಲ್ಲದ ಕಾರಣ ಮುಂದಿನ ದಿನಗಳಲ್ಲಿ ಎಲ್ಲಾ ರೂಟುಗಳಲ್ಲಿಯೂ ಬಸ್ಸು ಹೆಚ್ಚು ಓಡಾಟ ನಡೆಸಲಿದೆ. ಹೊಸದಾಗಿ ನೇಮಕವಾಗಿರುವ ಚಾಲಕ ಮತ್ತು ನಿರ್ವಾಹಕರು ಕನಿಷ್ಠ 5 ವರ್ಷಗಳ ಕಾಲ ಪುತ್ತೂರಿನಲ್ಲಿಯೇ ಕರ್ತವ್ಯವನ್ನು ಮಾಡಬೇಕು ಎಂಬುದು ಸರಕಾರದ ಆದೇಶವಾಗಿರುತ್ತದೆ.

ಇದನ್ನ ಓದಿ: Accident: ಮರವೂರು: ಬೈಕ್ ಮತ್ತು ಕಾರಿನ ನಡುವೆ ಭೀಕರ ಅಪಘಾತ!

Comments are closed.