Home News Shocking : ಪ್ರೀತಿ ನಿರಾಕರಿಸಿದ ಯುವಕ – ಸೇಡು ತೀರಿಸಿಕೊಳ್ಳಲು 12 ರಾಜ್ಯಗಳಿಗೆ ಭಯ ಹುಟ್ಟಿಸಿದ...

Shocking : ಪ್ರೀತಿ ನಿರಾಕರಿಸಿದ ಯುವಕ – ಸೇಡು ತೀರಿಸಿಕೊಳ್ಳಲು 12 ರಾಜ್ಯಗಳಿಗೆ ಭಯ ಹುಟ್ಟಿಸಿದ ಯುವತಿ!!

Hindu neighbor gifts plot of land

Hindu neighbour gifts land to Muslim journalist

Shocking : ತಾನು ಪ್ರೇಮಾ ನಿವೇದನೆಯನ್ನು ಯುವಕನು ನಿರಾಕರಿಸಿದ ಎಂಬ ಕಾರಣಕ್ಕಾಗಿ ಆತನ ಮೇಲೆ ಸೇರುವುದು ತರಿಸಿಕೊಳ್ಳಲು ಯುವತಿ ಒಬ್ಬಳು ಬರೋಬ್ಬರಿ 12 ರಾಜ್ಯಗಳಿಗೆ ಭಯ ಹುಟ್ಟಿಸಿದ ವಿಚಿತ್ರ ಘಟನೆ ನಡೆದಿದೆ.

ಹೌದು, ಚೆನ್ನೈ ಮೂಲದ ರೆನೀ ಜೋಶಿಲ್ಡಾ ಎಂಬ ಯುವತಿಯೊಬ್ಬಳು ದಿವಿಜ್ ಪ್ರಭಾಕರ್ ಎಂಬ ಯುವಕನನ್ನು ತುಂಬಾ ಪ್ರೀತಿ ಮಾಡುತ್ತಿದ್ದಳು. ಆದರೆ, ಅದು ಒನ್ ಸೈಡ್ ಲವ್ ಆಗಿತ್ತು. ತನ್ನ ಪ್ರೇಮ ನಿವೇದನೆಯನ್ನು ಆತ ನಿರಾಕರಿಸಿದಾಗ ಸೇಡು ತೀರಿಸಿಕೊಳ್ಳಲು ಆಕೆ ಒಂದು ದೊಡ್ಡ ಸಂಚನ್ನೇ ರೂಪಿಸಿದಳು. 12 ರಾಜ್ಯಗಳಲ್ಲಿ ಭಯ ಹುಟ್ಟಿಸಲು ಇದುವೇ ಇವತ್ತಿಗೆ ಮೂಲಕ ಕಾರಣವಾಯಿತು.

ಅಂದಹಾಗೆ ಪ್ರಭಾಕರ್ ಹೆಸರಿನಲ್ಲಿ ಹಲವಾರು ನಕಲಿ ಇಮೇಲ್ ಖಾತೆಗಳನ್ನು ರಚಿಸಿದ ಜೋಶಿಲ್ಡಾ, ಆ ಇಮೇಲ್ ಐಡಿಗಳನ್ನು ಬಳಸಿಕೊಂಡು ವಿವಿಧ ಪ್ರದೇಶಗಳಿಗೆ ಬಾಂಬ್ ಬೆದರಿಕೆ ಮತ್ತು ಸಂದೇಶಗಳನ್ನು ಕಳುಹಿಸಿದಳು. ಈ ಬೆದರಿಕೆಗಳು ದೇಶದ 11 ರಾಜ್ಯಗಳಲ್ಲಿ ಸಂಚಲನ ಮೂಡಿಸಿವೆ.

ಬೆದರಿಕೆ ಸಂದೇಶಗಳು ಸಾರ್ವಜನಿಕ ಸ್ಥಳಗಳನ್ನೇ ಗುರಿಯಾಗಿಸಿಕೊಂಡಿದ್ದವು. ಈ ಬಗ್ಗೆ ಹಲವಾರು ಪೊಲೀಸ್ ಇಲಾಖೆಗಳು ಜಂಟಿಯಾಗಿ ಪ್ರತಿಕ್ರಿಯಿಸಿ, ಬೆದರಿಕೆ ಇ-ಮೇಲ್‌ಗಳನ್ನು ಯಾರು ಕಳುಹಿಸುತ್ತಿದ್ದಾರೆ ಎಂಬುದರ ಕುರಿತು ತನಿಖೆ ಆರಂಭಿಸಿದರು. ಕೊನೆಗೂ, ಅಹಮದಾಬಾದ್‌ನ ಸೈಬರ್ ಅಪರಾಧ ವಿಭಾಗವು ಜೋಶಿಲ್ಡಾ ಅವರನ್ನು ಗುರುತಿಸಿ ಬಂಧಿಸಿದೆ.

ಜೋಶಿಲ್ಡಾ, ಡಾರ್ಕ್ ವೆಬ್ ಮೂಲಕ ಈ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಳು. ಯಾರೂ ತನ್ನನ್ನು ಗುರುತಿಸುವುದಿಲ್ಲ ಎಂದು ಆಕೆ ಭಾವಿಸಿದ್ದಳು. ಆ ಸಮಯದಲ್ಲಿ, ಆ ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಪೊಲೀಸರಿಗೆ ಸಿಕ್ಕಿಬಿದ್ದಳು. ಪೊಲೀಸರು ಚೆನ್ನೈನಲ್ಲಿ ಅವಳ ಸ್ಥಳವನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಪೊಲೀಸರು ಅವಳಿಂದ ಡಿಜಿಟಲ್ ಡೇಟಾ ಮತ್ತು ಹಲವಾರು ಪುರಾವೆಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಭಾಕರ್ ನನ್ನ ಪ್ರೀತಿಯನ್ನು ನಿರಾಕರಿಸಿದ. ಹೀಗಾಗಿ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದೆ ಎಂದು ಜೋಶಿಲ್ಡಾ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: Electric flight: ವಿಶ್ವದ ಮೊದಲ ಎಲೆಕ್ಟ್ರಿಕ್ ವಿಮಾನ ಹಾರಾಟ ಯಶಸ್ವಿ!