Cyber crime: “Mayfield Trading” ಎಂಬ ಶೇರು ಮಾರುಕಟ್ಟೆಯಿಂದ ವ್ಯಕ್ತಿಯೋರ್ವರಿಗೆ 46 ಲಕ್ಷ ವಂಚನೆ!

Cyber crime: ವ್ಯಕ್ತಿಯೋರ್ವರ ಮೊಬೈಲ್ ನಂಬರ್ ನ್ನು Mayfield Trading ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ದೂರುದಾರರ ಮೊಬೈಲ್ ನಂಬರ್ ಅನ್ನು ಜಾಯಿನ್ ಮಾಡಿ ಶೇರು ಮಾರುಕಟ್ಟೆಯಲ್ಲಿ ಸ್ಟಾಕ್ ಖರೀದಿ ಮಾಡಿ ನಂತರ ಮಾರಾಟ ಮಾಡಿದರೆ ಲಾಭಾಂಶ ಬರುತ್ತದೆ ಎಂಬ ಆಮಿಷಕ್ಕೆ ಬಲಿಯಾಗಿ 46,50,022/- ರೂ ಗಳನ್ನು ಕಳೆದುಕೊಂಡ ಘಟನೆ ವರದಿಯಾಗಿದೆ.
ದೂರುದಾರರ ಮೊಬೈಲ್ ನಂಬರ್ ಗೆ
Mayfield Trading ವಾಟ್ಸಾಪ್ ಗ್ರೂಪ್ ನಲ್ಲಿ ನಲ್ಲಿ ಯಾರೋ ಅಪರಿಚಿತ ವ್ಯಕ್ತಿಯ ಮೊಬೈಲ್ ನಂಬ್ರದಿಂದ ಮೆಸೇಜ್ ಬಂದಿದ್ದು, ಪರಿಶೀಲಿಸಿ ನೋಡಿದಾಗ Mayfield Trading ಎಂಬ ಶೇರು ಮಾರುಕಟ್ಟೆಯಲ್ಲಿ ಸ್ಟಾಕ್ ಖರೀದಿ ಮಾಡಿ ನಂತರ ಮಾರಾಟ ಮಾಡಿದರೆ ಲಾಭಾಂಶ ಬರುತ್ತದೆ ಎಂಬ ಮೆಸೇಜ್ ಇರುತ್ತದೆ. ಇದನ್ನು ನೋಡಿ ನಂಬಿದ ದೂರುದಾರರು ಟ್ರೇಡಿಂಗ್ ನಲ್ಲಿ ಆಸಕ್ತಿ ಇರುವುದಾಗಿ ತಿಳಿಸಿದ್ದಾರೆ.
ನಂತರ ದಿನಾಂಕ 07-05-2025 ರಂದು ಟಾಮ್ ಹ್ಯಾರೀಸ್ ಎಂಬ ವ್ಯಕ್ತಿಯು 7073254819 ನೇ ನಂಬ್ರದಿಂದ ದೂರುದಾರರ ಮೊಬೈಲ್ ನಂಬರ್ ಗೆ ವಾಟ್ಸಾಪ್ ಮಾಡಿ ತನ್ನನ್ನು Mayfield Trading Investment Group ನ ಸರ್ವೀಸ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು ತಮ್ಮ ಟ್ರೇಡಿಂಗ್ ಬಗ್ಗೆ ತಿಳಿಸಿ ಒಂದು ರಿಜಿಸ್ಟ್ರೇಷನ್ ಲಿಂಕ್ https://m.mayfieldindia.vip/register?u=35629961 ನ್ನು ಕಳುಹಿಸಿ ಈ ಲಿಂಕ್ ನ್ನು ಒತ್ತಿ ಹೆಸರು ವಿಳಾಸ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಿ ರಿಜಿಸ್ಟರ್ ಮಾಡುವಂತೆ ತಿಳಿಸಿದ್ದು, ಅಂತೆಯೇ ಅವರು ರಿಜಿಸ್ಟ್ರೇಷನ್ ಮಾಡಿಕೊಂಡಿದ್ದು, ದುರುದಾರ ಸ್ಟಾಕ್ ಖರೀದಿ ಮಾಡಲು ಹಂತ ಹಂತವಾಗಿ ಒಟ್ಟು 46,50,022/- ರೂ ಗಳನ್ನು ಅಪರಿಚಿತ ವ್ಯಕ್ತಿಯು ನೀಡಿದ ಮತ್ತು ದೂರಿನಲ್ಲಿ ತಿಳಿಸಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ RTGS ಮತ್ತು IMPS ಮೂಲಕ ವರ್ಗಾವಣೆ ಹಣ ಮಾಡಿರುತ್ತಾರೆ. ಹೂಡಿಕೆ ಮಾಡಿದ ಹಣವನ್ನು ವಿತ್ ಡ್ರಾ ಮಾಡಲು ಹೋದಾಗ ವಿತ್ ಡ್ರಾ ಮಾಡಲು ಆಗದೇ ಇದ್ದು, ಇದರ ಬಗ್ಗೆ ಅಪರಿಚಿತ ವ್ಯಕ್ತಿ ಟಾಮ್ ಹ್ಯಾರೀಸ್ ರವರಿಗೆ ಮೇಸೆಜ್ ಮಾಡಿ ಕೇಳಿದಾಗ ಹಣ ವಿತ್ ಡ್ರಾ ಮಾಡಲು TAX ಹಣ ಕಟ್ಟುವಂತೆ ತಿಳಿಸಿರುತ್ತಾರೆ. ನಂತರ ಈ ಬಗ್ಗೆ ದೂರುದಾರರು ಅನುಮಾನಗೊಂಡು ಮೋಸ ಹೋಗಿರುವ ವಿಚಾರ ತಿಳಿದಿದೆ.
ಈ ರೀತಿಯಾಗಿ ಯಾರೋ ಅಪರಿಚಿತ Mayfield Trading Investment Group ಹೆಸರಿನಲ್ಲಿ ಆನ್ ಲೈನ್ ಮೂಲಕ 10-05-2025 ರಿಂದ 04-06-2025 ವರೆಗೆ 46,50,022/-ಹಣವನ್ನು ಮೋಸದಿಂದ ಪಾವತಿಸಿಕೊಂಡು ಆನ್ ಲೈನ್ ವಂಚನೆ ಮಾಡಿದ್ದಾರೆ.
Comments are closed.