Udupi: ಮೀಶೋ ಹೆಸರಿನಲ್ಲಿ ಮಹಿಳೆಗೆ ಆನ್ಲೈನ್ ವಂಚನೆ!

Udupi: ಮೀಶೋದಿಂದ ಕಾಲ್ ಮಾಡುತ್ತಿರುವುದಾಗಿ ತಿಳಿಸಿ ಮಹಿಳೆಗೆ ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಶುಭಾ ಎಂಬವರು ಮೋಸ ಹೋದ ಮಹಿಳೆಯಾಗಿದ್ದಾರೆ.

ಎರಡು ವರ್ಷದ ಹಿಂದೆಯೇ ಮೀಶೋದಲ್ಲಿ ವಸ್ತುಗಳನ್ನು ಆರ್ಡರ್ ಮಾಡಿ ತರಿಸುತ್ತಿದ್ದ ಇವರು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಆರ್ಡರ್ ಮಾಡಿದ್ದರು. ಅದು ತಾನಾಗಿಯೇ ರದ್ದುಗೊಂಡಿತ್ತು.
ಆದರೆ ಹಣ ಪಾವತಿಯಾಗಿರಲಿಲ್ಲ. ಆನಂತರ ಅಪರಿಚಿತ ವ್ಯಕ್ತಿಯೋರ್ವ ಕರೆಮಾಡಿ ಮೀಶೋದಿಂದ ಮಾತನಾಡುವಂತೆ ನಿಮ್ಮ ಆರ್ಡರ್ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸುತ್ತೇವೆಂದು ಒಟಿಪಿ ಪಡೆದುಕೊಂಡಿದ್ದಾರೆ.
ನಂತರ ಶುಭಾ ಅವರ ಯೂನಿಯನ್ ಬ್ಯಾಂಕ್ ಖಾತೆಯಿಂದ ನಲ್ವತ್ತು ಸಾವಿರದ ಐನೂರು ರೂಪಾಯಿ ವರ್ಗಾಯಿಸಿಕೊಂಡು ಅವರನ್ನು ನಂಬಿಸಿ ವಂಚಿಸಿದ್ದಾನೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.