Gaia: ರೈಲಿನಿಂದ ಇಳಿದು ಮೂಟೆ ಹೊತ್ತು ಓಡಿದ ಇಬ್ಬರು ಯುವಕರು – ಹಿಡಿದು ಚೀಲ ಓಪನ್ ಮಾಡಿದಾಗ ಪೊಲೀಸರಿಗೆ ಕಾದಿತ್ತು ಶಾಕ್, ಏನಿತ್ತು ಒಳಗೆ?

Share the Article

Gaia: ರೈಲು ನಿಲ್ದಾಣ ಒಂದರಲ್ಲಿ ರೈಲು ನಿಲ್ಲುತ್ತಿದ್ದಂತೆ ಇಬ್ಬರು ಯುವಕರು ಮೂಟೆ ಹೊತ್ತು ಓಡಿದ್ದಾರೆ. ಇವರಿಬ್ಬರನ್ನು ಗಮನಿಸಿದ ಪೊಲೀಸರು ತಕ್ಷಣ ಅವರನ್ನು ಹಿಡಿದು ಚೀಲವನ್ನು ಓಪನ್ ಮಾಡಿ ಏನಿದೆ ಎಂದು ನೋಡಿದಾಗ, ಪೊಲೀಸರಿಗೆ ದೊಡ್ಡ ಶಾಕ್ ಎದುರಾಗಿದೆ.

ಹೌದು, ಇದ್ದಕ್ಕಿದ್ದಂತೆ ಗಯಾ ಜಂಕ್ಷನ್‌ ನ ಒಂದು ಮೂಲೆಯಲ್ಲಿ ಅಸಾಮಾನ್ಯ ಗದ್ದಲ ಶುರುವಾಯ್ತು. ನೋಡುತ್ತಿದ್ದಂತೆ ಹೆಗಲ ಮೇಲೆ ಚೀಲಗಳನ್ನು ಹೊತ್ತುಕೊಂಡು ಇಬ್ಬರು ಯುವಕರು ಜನಸಂದಣಿಯಿಂದ ಓಡಿಹೋಗುತ್ತಿದ್ದರು. ಅವರನ್ನು ರೈಲ್ವೆ ಪೊಲೀಸ್ ಹಿಂಬಾಲಿಸಿದ್ರು. ಪ್ಲಾಟ್‌ ಫಾರ್ಮ್‌ ನಲ್ಲಿದ್ದ ಸಾಮಾನ್ಯ ಪ್ರಯಾಣಿಕರರು ಕೂಡ ಆತಂಕಗೊಂಡಿದ್ರು.

ಪೊಲೀಸರು ವಶಪಡಿಸಿಕೊಂಡ ಬ್ಯಾಗ್ ಅನ್ನು ತೆರೆದಾಗ, ಸೀಕ್ರೆಟ್ ಬಯಲಾಗಿದೆ. ಇದು ಇಡೀ ತನಿಖೆಯ ದಿಕ್ಕನ್ನೇ ಬದಲಾಯಿಸಿತು. ಯಾಕೆಂದರೆ ಅದರೊಳಗೆ ಇದ್ದದ್ದು ಫಾರಿನ್ ಮದ್ಯ. ಯಸ್, ಆ ಇಬ್ಬರು ಯುವಕರಿಂದ 48 ಬಿಯರ್ ಕ್ಯಾನ್‌ಗಳು ಮತ್ತು 120 ಬಾಟಲಿಗಳ ದುಬಾರಿ ವಿದೇಶಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮದ್ಯದ ಮಾರುಕಟ್ಟೆ ಮೌಲ್ಯ ಸುಮಾರು 23 ಸಾವಿರ.

ಬಂಧಿತ ಇಬ್ಬರು ಯುವಕರ ಹೆಸರುಗಳು ಪಂಕಜ್ ಕುಮಾರ್ ಮತ್ತು ಕಾಂಚನ್ ಕುಮಾರ್ ವಿಚಾರಣೆಯ ನಂತರ, ಅವರು ಈ ಮಾರ್ಗದಲ್ಲಿ ಪೊಲೀಸರ ಕಣ್ಣು ತಪ್ಪಿಸಿ ರೈಲಿನ ಮೂಲಕ ಮದ್ಯವನ್ನು ಹಲವು ದಿನಗಳಿಂದ ಸಾಗಿಸುತ್ತಾ ಹಣ ಮಾಡಿದ್ದಾರೆ. ನಳಂದದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಕಂಡುಕೊಂಡರು. ಬಿಹಾರದಲ್ಲಿ ಕೆಲ ಮದ್ಯವನ್ನು ನಿಷೇಧಿಸಲಾಗಿರುವುದರಿಂದ, ಅವರು ಈ ಮದ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗ್ತಿದೆ.

 

ಇದನ್ನೂ ಓದಿ: Iran-Israel War: ‘ಇಸ್ರೇಲ್ ಇರಾನ್ ಸಂಘರ್ಷ: ರಷ್ಯಾ ಇರಾನ್‌ಗೆ ಏಕೆ ಸಹಾಯ ಮಾಡುತ್ತಿಲ್ಲ? ಪ್ರಶ್ನೆಗೆ ಉತ್ತರಿಸಿದ ಪುಟಿನ್

Comments are closed.