West Bengal: ಅಂತರ್ಜಾತಿ ವಿವಾಹವಾದ ಮಗಳು – ನಮ್ಮ ಪಾಲಿಗೆ ಸತ್ತಳು ಎಂದು ಶ್ರಾದ್ಧ ಕಾರ್ಯ ನಡೆಸಿದ ಪೋಷಕರು

Share the Article

West Bengal: ಮಗಳು ಅನ್ಯ ಜಾತಿಯ ಯುವಕನೊಂದಿಗೆ ಮದುವೆಯಾದಲೆಂದು ಯುವತಿಯ ಕುಟುಂಬಸ್ಥರು ಆಕೆ ಬದುಕಿರುವಾಗಲೇ ಆಕೆಯ ಶ್ರಾದ್ಧಾ ಮಾಡಿರುವಂತಹ ಘಟನೆ ಬೆಳಕಿಗೆ ಬಂದಿದೆ.

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಯುವತಿ ಅನ್ಯ ಜಾತಿಯ ವ್ಯಕ್ತಿಯೊಂದಿಗೆ ಓಡಿಹೋಗಿ ಮದುವೆಯಾದ 12 ದಿನಗಳ ನಂತರ ಆಕೆಯ ಕುಟುಂಬಸ್ಥರು ಶ್ರಾದ್ಧ ನಡೆಸಿದ್ದಾರೆ. ಅವಳು ನಮಗೆ ಇನ್ನು ಸತ್ತಂತೆಯೇ. ನಾವು ಅವಳ ಮದುವೆಯನ್ನು ಏರ್ಪಡಿಸಿದ್ದೆವು. ಆದರೆ ಅವಳು ನಮ್ಮ ಮಾತನ್ನು ಕೇಳಲು ಸಹ ಬಯಸಲಿಲ್ಲ. ಈ ರೀತಿ ನಮ್ಮನ್ನು ಬಿಟ್ಟು ಅವಳು ಅಪಖ್ಯಾತಿ ತಂದಳು. ಹೀಗಾಗಿ ಅವಳು ಇನ್ನು ನಮ್ಮ ಪಾಲಿಗೆ ಇಲ್ಲ ಎಂದು ಈ ಕಾರ್ಯವನ್ನು ಮಾಡಿದ್ದಾರೆ.

ಅಲ್ಲದೆ ತಲೆ ಬೋಳಿಸುವುದು ಸೇರಿದಂತೆ ಶ್ರಾದ್ಧದ ಎಲ್ಲಾ ವಿಧಿವಿಧಾನಗಳನ್ನು ಅನುಸರಿಸಲಾಯಿತು. ಪೂಜಾರಿ ಸಮಾರಂಭವನ್ನು ನಡೆಸಿದ ಸ್ಥಳದಲ್ಲಿ ಮಹಿಳೆಯ ಹಾರ ಹಾಕಿದ ಫೋಟೋವನ್ನು ಸಹ ಇರಿಸಲಾಗಿತ್ತು.ನಾವು ಅವಳ ಎಲ್ಲಾ ವೈಯಕ್ತಿಕ ವಸ್ತುಗಳನ್ನು ಸಹ ಸುಟ್ಟುಹಾಕಿದ್ದೇವೆ ಎಂದು ಆಕೆಯ ತಾಯಿ ಹೇಳಿದರು.

 

ಇದನ್ನೂ ಓದಿ: Railway Station : ರೈಲ್ವೆ ನಿಲ್ದಾಣದಲ್ಲಿ ಅನೌನ್ಸ್ಮೆಂಟ್ ಬಳಿಕ ಮೈಕ್ ಆಫ್ ಮಾಡುವುದನ್ನು ಮರೆತರ ಮಹಿಳಾ ಸಿಬ್ಬಂದಿ – ಆಕೆ ಮಾತು ಕೇಳಿ ಪ್ರಯಾಣಿಕರೆಲ್ಲ ಶಾಕ್ !!

Comments are closed.