Bengaluru : ಗ್ರೂಪ್ ‘B’ ಮತ್ತು ಗ್ರೂಪ್ ‘C’ 14,582 ಹುದ್ದೆಗಳ ನೇಮಕಾತಿ – ಪರೀಕ್ಷೆಗೆ ಅರ್ಜಿ ಆಹ್ವಾನ!!

Share the Article

Bengaluru: ವಿವಿಧ ನಾನ್ ಗೆಜೆಟೆಡ್ ಗ್ರೂಪ್ ‘ಬಿ’ ಮತ್ತು ಗ್ರೂಪ್ ‘ಸಿ’ 14,582 ಹುದ್ದೆಗಳ ನೇಮಕಾತಿಗಾಗಿ ಸಂಯೋಜಿತ ಪದವಿ ಮಟ್ಟದ ಪರೀಕ್ಷೆಗೆ ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗ (ಕರ್ನಾಟಕ-ಕೇರಳ ಪ್ರದೇಶ, ಭಾರತ ಸರ್ಕಾರ) ಬೆಂಗಳೂರು, ಇವರು ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು.

 

ಅರ್ಜಿ ಸಲ್ಲಿಸುವವರು 18 ರಿಂದ 32 ವರ್ಷದೊಳಗಿರಬೇಕು. ನಿರ್ದಿಷ್ಟ ವರ್ಗದವರಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಅಧಿಸೂಚನೆಯ ಪ್ಯಾರಾ-5 ಅನ್ನು ಪರಿಶೀಲಿಸಬಹುದು. ಪರೀಕ್ಷೆಯ ಸಂಭವನೀಯ ದಿನಾಂಕ 2025 ರ ಆಗಸ್ಟ್, 13 ರಿಂದ 30 ರವರೆಗೆ, ಶುಲ್ಕ ರೂ.100, (ಎಸ್ಸಿ/ಎಸ್ಟಿ/ಮಹಿಳೆ/ದಿವ್ಯಾಂಗರು/ಮಾಜಿ ಸೈನಿಕರಿಗೆ ಶುಲ್ಕವಿಲ್ಲ). ಅರ್ಜಿ ಸಲ್ಲಿಸಲು ಜುಲೈ, 04 ರ ಮಧ್ಯಾಹ್ನ 11 ಗಂಟೆಗೆ ಕೊನೆಯ ದಿನವಾಗಿದೆ.

 

ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ, ನಿರ್ದಿಷ್ಟ ಹುದ್ದೆಗಳ ಅಪೇಕ್ಷಣೀಯ ಅರ್ಹತೆಯ ವಿವರಗಳಿಗೆ ಎಸ್‍ಎಸ್‍ಸಿ ಅಧಿಸೂಚನೆಯ ಪ್ಯಾರಾ-8 ಅನ್ನು ಪರಿಶೀಲಿಸಬಹುದು.

 

ಹೆಚ್ಚಿನ ಮಾಹಿತಿಗೆ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ ಹಾಗೂ ದೂರವಾಣಿ ಸಂಖ್ಯೆ 9449692691, ವೆಬ್‍ಸೈಟ್ www.ssckkr.kar.nic.in ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಮಂಜುನಾಥ್ ಅವರು ತಿಳಿಸಿದ್ದಾರೆ.

 

 

 

 

ಇದನ್ನೂ ಓದಿ: Karnataka: ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೆ: ಸರ್ಕಾರ ಮತ್ತು ಶಿಕ್ಷಣ ‌ಇಲಾಖೆ ಆದೇಶ! 

Comments are closed.