Home News PM Modi: ಪ್ರಧಾನಿ ನಿವಾಸದಲ್ಲಿ ನಿಮ್ಮ ಪತ್ನಿ ಏಕಿಲ್ಲ, ಸಿಂಧೂರ್ ಹಾಕಿದ ನಿಮ್ಮ ಪತ್ನಿಗೆ ಏನು...

PM Modi: ಪ್ರಧಾನಿ ನಿವಾಸದಲ್ಲಿ ನಿಮ್ಮ ಪತ್ನಿ ಏಕಿಲ್ಲ, ಸಿಂಧೂರ್ ಹಾಕಿದ ನಿಮ್ಮ ಪತ್ನಿಗೆ ಏನು ಮಾಡಿದ್ರಿ- ಮೋದಿ ವಿರುದ್ಧ ಅವಿಮುಕ್ತೇಶ್ವರಾನಂದ ಸ್ವಾಮೀಜಿ ವಾಗ್ದಾಳಿ!!

Hindu neighbor gifts plot of land

Hindu neighbour gifts land to Muslim journalist

PM Modi : ನೀವೇ ‘ಸಿಂಧೂರ್’ ಹಾಕಿದ ಪತ್ನಿಗೆ ಏನು ಮಾಡಿದ್ರಿ ? ನಿಮ್ಮ ಪತ್ನಿ ಪ್ರಧಾನಿ ನಿವಾಸದಲ್ಲಿ ಯಾಕಿಲ್ಲ? ನೀವು ನಿಮ್ಮ ಪತ್ನಿಯ ಹಕ್ಕನ್ನು ಕಸಿದುಕೊಂಡಿದ್ದೀರಲ್ಲವೇ ಎಂದು ಪ್ರಧಾನಿ ವಿರುದ್ಧ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳು ಕೇಳಿದ ಆಪರೇಷನ್ ಸಿಂಧೂರ್’ ಯಶಸ್ವಿಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ವಾಮಿ ಅವಿಮುಕ್ತೇಶ್ವರಾನಂದ, ‘ಸಿಂಧೂರ್’ ಎಂಬ ಪದವೇ ಇಂದು ಅಳುತ್ತಿದೆ. ಭಾರತದಲ್ಲಿ ನನ್ನ ಗೌರವ ಏನಿತ್ತು? ಸಿಂಧೂರ್‌ನ ಗೌರವ ಏನಿತ್ತು?´ ಒಂದು ಡಬ್ಬಿ ಬಹಳ ದೊಡ್ಡ ಅರ್ಥ ಹೇಳುತ್ತಿತ್ತು. ಭಾರತದಲ್ಲಿ ‘ಸಿಂಧೂರ್’ ಎಂದರೆ ಬಹಳ ದೊಡ್ಡ ವಿಷಯ. ಒಂದು ಚಿಟಿಕೆ ಸಿಂಧೂರ್‌ಗೆ ದೊಡ್ಡ ಮಹತ್ವ ಇದೆ. ಇಂದು ಸಿಂಧೂರ್‌ನ ಸ್ಥಿತಿ ಏನು? ಸಿಂಧೂರ್ ಬಗ್ಗೆ ಮಾತಾಡುವವರು ಸಿಂಧೂರ್‌ನ ಮಾನ ಕಾಪಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.

ನೀವು ಸಿಂಧೂರ್ ಕುರಿತು ಮಾತಾಡುತ್ತೀರಿ, ನೀವು ಸಿಂಧೂರ್ ಹಾಕಿದವರೊಂದಿಗೆ ಹೇಗೆ ವರ್ತಿಸಿದ್ದೀರಿ? ಹೇಳಿ. ನಿಮ್ಮ ಕರ್ತವ್ಯ ಅಲ್ಲವೇ? ನೀವು ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ‘ಆಕೆ ನನ್ನ ಪತ್ನಿ’ ಎಂದು ಬರೆದಿದ್ದೀರಿ. ಆಗ ಪತ್ನಿಯ ಗೌರವವನ್ನು ಆಕೆಯಿಂದ ಹೇಗೆ ಕಸಿದುಕೊಳ್ಳಬಹುದು? ಅವಳು ಪ್ರಧಾನಮಂತ್ರಿ ನಿವಾಸದಲ್ಲಿ ಇರಬೇಕಿತ್ತು, ಆಕೆಗೆ ಆ ಹಕ್ಕು ಇದೆ. ನೀವು ಆಕೆಯ ಹಕ್ಕನ್ನು ಏಕೆ ಕಸಿದುಕೊಂಡಿದ್ದೀರಿ? ಎಂದು ಪ್ರಶ್ನಿಸಿದರು.

ನೀವು ಮಾತಾಡಲಿಲ್ಲ, ನಿಮಗೆ ಸರಿ ಇರಲಿಲ್ಲ. ಆದರೆ, ಆಕೆ ನಿಮ್ಮ ಕಾನೂನುಬದ್ಧ ಪತ್ನಿ. ಆಗ ಪ್ರಧಾನಮಂತ್ರಿಯ ಪತ್ನಿ ಎಂಬ ಗೌರವ ಆಕೆಗೆ ಬರಬೇಕಿತ್ತು. ಆಕೆ ಅದರಿಂದ ವಂಚಿತಳಾಗಿದ್ದಾಳೆ. ನೀವು ಆಕೆಯನ್ನು ಒಂಟಿಯಾಗಿ ಬಿಟ್ಟಿದ್ದೀರಿ. ಈಗ ಮುರಾರಿ ಬಾಪು ಬಂದಿದ್ದಾರೆ. ಅವರು ಮಾನಸ್ ಸಿಂಧೂರ್ ಕಥೆ ಹೇಳುತ್ತಿದ್ದಾರೆ. ಸಿಂಧೂರ್ ಪದವನ್ನು ಉಪಯೋಗಿಸುತ್ತಿದ್ದರು. ಅವರು ಮೂರು ದಿನದ ಹಿಂದೆ ನಿಧನರಾಗಿದ್ದಾರೆ. ಕನಿಷ್ಠ 10 ದಿನ ಸಿಂಧೂರ್ ನ ಮಾನ ಕಾಪಾಡಬೇಕಿತ್ತು. ಸಿಂಧೂರ್‌ನ ಮಾನ ಕಾಪಾಡದವರು ಸಿಂಧೂರ್‌ನ ಬಗ್ಗೆ ಮಾತಾಡುತ್ತಿದ್ದಾರೆ. ಇದರಿಂದ, ‘ಸಿಂಧೂರ್’ ಪದವು ಈಗ ನನ್ನೊಂದಿಗೆ ಏನು ಆಗುತ್ತಿದೆ? ನಾನು ಏನಾಗಿದ್ದೆ ಮತ್ತು ಏನು ಆಗುತ್ತಿದ್ದೇನೆ?’ ಎಂದು ದುಃಖಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Udupi: ಉಡುಪಿ: ಗಂಗೊಳ್ಳಿಯಲ್ಲಿ ಅಕ್ರಮ ದನ ಸಾಗಾಟ, ಆರೋಪಿ ಅರೆಸ್ಟ್