1,000 ಕಿ.ಮೀ. ದೂರದಿಂದಲೇ ರಿಮೋಟ್ ದಾಳಿ: ಕಾರಿನಲ್ಲಿ ಹೋಗುತ್ತಿದ್ದ ಇರಾನ್ ಟಾಪ್ ಸೇನಾ ನಾಯಕ ಹತ್ಯೆ

Tel aviv : ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಅಂಗ ಸಂಸ್ಥೆ ಪ್ಯಾಲೆಸ್ಟೈನ್ ಕಾರ್ಪ್ಸ್‌ನ ಕಮಾಂಡರ್, ಇರಾನ್ ಮತ್ತು ಹಮಾಸ್ (Hamas) ನಡುವಿನ ಪ್ರಮುಖ ಕೊಂಡಿ ಎಂದೇ ಪರಿಗಣಿಸಲಾಗಿದ್ದ ಬೆಹ್ನಮ್ ಶಹರಿಯಾರಿಯನ್ನು (Behnam Shahriyari) ಇಸ್ರೇಲ್ (Israel) ಹತ್ಯೆ ಮಾಡಿದೆ.
ಬೆಹ್ನಮ್ ಶಹರಿಯಾರಿ ಪಶ್ಚಿಮ ಇರಾನ್‌ನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲೇ ಇಸ್ರೇಲ್ ಡ್ರೋನ್ ಹಾರಿಸಿ ಹತ್ಯೆ ಮಾಡಿದೆ. ಇಸ್ರೇಲ್ ಭೂಪ್ರದೇಶದ 1,000 ಕಿ.ಮೀ ದೂರದಲ್ಲಿದ್ದ ಪ್ರದೇಶದ ಮೇಲೆ ನಿಖರ ದಾಳಿ ಮಾಡಿ ಹತ್ಯೆ ಮಾಡಿದೆ. ಅಷ್ಟೇ ಅಲ್ಲದೇ ಕಾರಿನ ಮೇಲೆ ದಾಳಿ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಸೇಡು ತೀರಿಸಿಕೊಂಡಿದೆ. ಹಮಾಸ್ ಉಗ್ರರು ಇಸ್ರೇಲ್ ಒಳಗಡೆ ನುಗ್ಗಿ ದಾಳಿ ನಡೆಸಿ ಹತ್ಯಾಕಾಂಡ ಮಾಡಿದ್ದರು. ಅಕ್ಟೋಬರ್ 7, 2023 ರಲ್ಲಿ ಹಮಾಸ್ ನಡೆಸಿದ ಆ ನರಮೇಧಕ್ಕೆ ಹಣಕಾಸು ಮತ್ತು ಶಸ್ತ್ರಾಸ್ತ್ರ ಸಹಾಯವನ್ನು ಶಹರಿಯಾರಿ ಮಾಡಿದ್ದಾನೆ ಎಂದು ವರದಿಯಾಗಿದೆ.
ಗಾಜಾದಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ, ಉಗ್ರರಿಗೆ ಹಣಕಾಸಿನ ಸಹಾಯ, ಭಯೋತ್ಪಾದಕ ಗುಂಪುಗಳಿಗೆ ತರಬೇತಿ ಶಹರಿಯಾರಿ ಮೂಲಕವೇ ನಡೆಯುತ್ತಿತ್ತು ಎಂದು ಇಸ್ರೇಲ್ ಹೇಳಿದೆ.
Comments are closed.