Jagan Mohan Reddy: ರೋಡ್ ಶೋ ವೇಳೆ ಅಭಿಮಾನಿ ತಲೆಯ ಮೇಲೆ ಹರಿದ ಜಗನ್ಮೋಹನ್ ರೆಡ್ಡಿ ಕಾರು – ಭಯಾನಕ ವಿಡಿಯೋ ವೈರಲ್

Share the Article

Jagan Mohan Reddy : ಆಂಧ್ರದ ಮಾಜಿ ಸಿಎಂ ಜಗನ್‌ ಮೋಹನ್‌ ರೆಡ್ಡಿ ರೋಡ್ ಶೋ ನಡೆಸುತ್ತಿದ್ದ ವೇಳೆ ಬೆಂಗಾವಲು ಪಡೆಯ ಕಾರಿನ ಕೆಳಗೆ ಸಿಲುಕಿ ವೃದ್ಧರೊಬ್ಬರು ಮೃತಪಟ್ಟಿರುವ ದಾರುಣ ಘಟನೆ ವಿಜಯವಾಡದಲ್ಲಿ ಸಂಭವಿಸಿದೆ. ಈ ಕುರಿತಾದ ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೃತ ಅಭಿಮಾನಿಯನ್ನು ಸಿಂಗಯ್ಯ ಎಂದು ಗುರುತಿಸಲಾಗಿದೆ. ಅಂದಹಾಗೆ ಎರಡು ದಿನಗಳ ಹಿಂದಷ್ಟೇ ಆತ್ಮಹತ್ಯೆಯಿಂದ ಮೃತಪಟ್ಟ ಕಾರ್ಯಕರ್ತರ ಕುಟುಂಬಕ್ಕೆ ಸಾಂತ್ವನ ಹೇಳಲು ಜಗನ್‌ ರೆಂಟಪಲ್ಲಿಗೆ ತೆರಳಿದ್ದರು. ಈ ವೇಳೆ ತಾಡೆಪಲ್ಲಿಯಿಂದ ಸಾವಿರಾರು ಮಂದಿ ರೆಂಟಿಪಲ್ಲಿಗೆ ಜಗನ್‌ ರನ್ನು ನೋಡಲು ನುಗ್ಗಿದ್ದರು. ಈ ವೇಳೆ ಕೇವಲ ನೂರು ಮಂದಿ ಸೇರಲು ಹಾಗೂ 3 ಬೆಂಗಾವಲು ಪಡೆಯ ವಾಹನಗಳಿಗೆ ಅನುಮತಿ ನೀಡಲಾಗಿತ್ತು. ಈ ವೇಳೆ ಜಗನ್‌ ಕಾರ್‌ ಮೇಲೆ ಹೂವಿನ ಹಾರ ಹಾಕಲು ಸಿಂಗಯ್ಯ ಜನಜಂಗುಳಿಯೊಳಗೆ ನುಗ್ಗಿದ್ದರು. ಈ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ.

ಇದನ್ನೂ ಓದಿ:Mangaluru: ಮಂಗಳೂರು: ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ತುಳು ಭಾಷೆ ಬಳಕೆಗೆ ನಿರ್ಬಂಧ, ವ್ಯಾಪಕ ಆಕ್ರೋಶದ ಬೆನ್ನಲ್ಲೇ ಆದೇಶ ವಾಪಸ್

Comments are closed.