Tragedy : ಆಗಸದಲ್ಲೇ ಹಾಟ್ ಏರ್ ಬಲೂನ್ ಬ್ಲಾಸ್ಟ್ – 8 ಮಂದಿ ಸಜೀವ ದಹನ, ಭಯಾನಕ ವಿಡಿಯೋ ವೈರಲ್

Share the Article

Tragedy : ಬ್ರೆಜಿಲ್‌ನಲ್ಲಿ ಹಾಟ್ ಏರ್ ಬಲೂನ್ ಪತನವಾಗಿ 8 ಜನ ಸಾವುಕಂಡಿದ್ದಾರೆ. ದುರಂತದಲ್ಲಿ 13 ಜನರಿಗೆ ಗಾಯಗಳಾಗಿವೆ. ಈ ಕುರಿತಾದ ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ಹೌದು, 21 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಾಟ್ ಏರ್ ಬಲೂನ್ ಹಾರಾಟದ ಮಧ್ಯದಲ್ಲಿ ಬೆಂಕಿ ಹೊತ್ತಿಕೊಂಡು ಬ್ರೆಜಿಲ್‌ನ ದಕ್ಷಿಣ ರಾಜ್ಯವಾದ ಸಾಂಟಾ ಕ್ಯಾಟರಿನಾದಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾದ ಪ್ರಿಯಾ ಗ್ರಾಂಡೆಯಲ್ಲಿ ಪತನಗೊಂಡ ಪರಿಣಾಮ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದು, 13 ಜನರು ಗಾಯಗೊಂಡಿದ್ದಾರೆ.

ಅಂದಹಾಗೆ ಆಗಸದಲ್ಲಿ ತೇಲುತ್ತಿದ್ದ ಹಾಟ್ ಏರ್ ಬಲೂನ್ ನೋಡ ನೋಡುತ್ತಿದ್ದಂತೆ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿದ್ದು, ಆ ನಂತರ ದೊಡ್ಡ ಸ್ಫೋಟ ಸಂಭವಿಸಿದೆ.ಈ ಹೋಟ್ ಏರ್ ಬಲೂನ್ ನಲ್ಲಿದ್ದ 8 ಮಂದಿ ಸಜೀವ ದಹನವಾಗಿದ್ದು,ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:Vittla: ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಮಹಮ್ಮದ್ ಶಾಹಿಲ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ!

Comments are closed.