Udupi: ಮಳೆ ರಜೆ ಸರಿದೂಗಿಸಲು 10 ಶನಿವಾರ ಬಲಿ: ಶಿಕ್ಷಣ ಇಲಾಖೆ ನಿರ್ಧಾರ

Share the Article

Udupi: ಮಳೆಯ ಆರ್ಭಟದಿಂದಾಗಿ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ನೀಡಿರುವ ರಜೆಯನ್ನು ಸರಿದೂಗಿಸುವ ಚಿಂತನೆಗೆ ಬೈಂದೂರು ಶಿಕ್ಷಣ ಇಲಾಖೆ ಮುಂದಾಗಿದೆ.

ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಒಟ್ಟು ಐದು ರಜೆಯನ್ನು ನೀಡಲಾಗಿತ್ತು.‌ ಅದನ್ನು ಸರಿದೂಗಿಸುವ ಹಿನ್ನೆಲೆ ಜೂನ್ 21, 28, ಜು.5, 12, 19, 26, ಅಗಸ್ಟ್ 2, 9, 16, 23 ಒಟ್ಟು 10 ಶನಿವಾರ ಪೂರ್ಣ ದಿನದವರೆಗೆ ಶಾಲೆ ನಡೆಸಲು ಆದೇಶಿಸಿ ಜಿಲ್ಲೆಯ ಸರ್ಕಾರಿ, ಅನುದಾನ ರಹಿತ, ಅನುದಾನಿತ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ಮುಖ್ಯಸ್ಥರಿಗೆ ಬೈಂದೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಸೂಚನೆ ಹೊರಡಿಸಿದ್ದಾರೆ.

ಇದನ್ನೂ ಓದಿ:Fake news: ಇನ್ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದರೆ ಬರೋಬ್ಬರಿ ಶಿಕ್ಷೆ

Comments are closed.