Uttar Pradesh: 34 ವರ್ಷ ಜೈಲು ವಾಸದ ಬಳಿಕ ನಿರಪರಾಧಿ ಎಂದ ಕೋರ್ಟ್

Uttar Pradesh: ಇತ್ತೀಚೆಗೆ ಅಪರಾಧಿಗಳು ಹೊರಗಿರುವುದು, ನಿರಪರಾಧಿಗಳು ಜೈಲಿನಲ್ಲಿರುವುದು ಹೆಚ್ಚಾಗಿ ಬಿಟ್ಟಿದೆ. ಇಲ್ಲೊಬ್ಬ ವೃದ್ಧ ಜೈಲಿಗೆ ಸೇರಿ 34 ವರ್ಷದ ಬಳಿಕ ನಿರಪರಾಧಿ ಎಂದು ಬಿಡುಗಡೆಯಾಗಿದ್ದಾರೆ.

ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ನಿವಾಸಿ 104 ವರ್ಷ ವಯಸ್ಸಿನ ಲಖನ್ ಲಾಲ್ ರನ್ನು, ಪ್ರಭು ಪಾಸಿ ಎಂಬ ಸಹ ಗ್ರಾಮಸ್ಥರ ಕೊಲೆಗಾಗಿ ಅವರನ್ನು ಜೈಲಿಗೆ ಹಾಕಲಾಗಿತ್ತು. 1977ರಲ್ಲಿ ನಡೆದ ಘಟನೆ ಇದಾಗಿದ್ದು, 1982 ರಲ್ಲಿ ಜಿಲ್ಲಾ ನ್ಯಾಯಾಲಯವು ಅವರನ್ನು ಅಪರಾಧಿ ಎಂದು ಸಾಬೀತು ಮಾಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇವರ ಜೊತೆ ಇನ್ನೂ ಮೂವರಿಗೂ ಇದೇ ಶಿಕ್ಷೆ ಆಗಿತ್ತು. ಇದನ್ನು ಪ್ರಶ್ನಿಸಿ ನಾಲ್ವರು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇವರು ಒಟ್ಟೂ 34 ವರ್ಷ ಲಖನ್ ಜೈಲಿನಲ್ಲಿ ಕಳೆದಿದ್ದು, ಈಗ ಅವರಿಗೆ 104 ವರ್ಷ. ಈಗ ಹೈಕೋರ್ಟ್ ನಿರಪರಾಧಿ ಎಂದು ಖುಲಾಸೆಗೊಳಿಸಿದೆ. ಇದಾಗಲೇ ಉಳಿದ ಮೂವರು ಪ್ರಾಣತ್ಯಾಗ ಮಾಡಿದ್ದಾರೆ!
ಈ ಪ್ರಕರಣದಲ್ಲಿ ಇವರ ತಪ್ಪು ಏನೂ ಇಲ್ಲ ಎಂದು ಲಖನ್ ಲಾಲ್ ಆತ್ಮೀಯರು, ಕುಟುಂಬಸ್ಥರು ಇಷ್ಟು ವರ್ಷ ಎಲ್ಲರ ಕಾಲು ಹಿಡಿದರು, ಮಾಡದ ಕೆಲಸವೇ ಇಲ್ಲ. ಸುಪ್ರೀಂ ಕೋರ್ಟ್ನಿಂದ ಹಿಡಿದು ಇಲ್ಲಿಯವರೆಗೆ ಮುಖ್ಯಮಂತ್ರಿ, ಕಾನೂನು ಸಚಿವರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಬಾಗಿಲು ತಟ್ಟುವುದರಿಂದ ಹಿಡಿದು ಎಲ್ಲರ ಕೈಕಾಲುಗಳನ್ನೂ ಹಿಡಿಯಲಾಗಿತ್ತು. ಆದರೆ ಏನೂ ಪ್ರಯೋಜನ ಆಗಿರಲಿಲ್ಲ. ಕೊನೆಗೆ 34 ವರ್ಷಗಳು ಅವರು ಜೈಲಿನಲ್ಲಿಯೇ ಕಳೆಯುವಂತಾಯಿತು. ಇದೀಗ ಬಿಡುಗಡೆಯಾಗಿದ್ದು, ನಿರಪರಾಧಿ ಗೆ ನ್ಯಾಯವೇ ಅನ್ಯಾಯ ಮಾಡಿದಂತಿದೆ.
ಇದನ್ನೂ ಓದಿ:Scam: ನರೇಗಾ ಯೋಜನೆಯಡಿ ಹಣ ಪಡೆಯಲು ಸೀರೆಯುಟ್ಟು ರೆಡಿಯಾದ ವ್ಯಕ್ತಿ
Comments are closed.