ಸೌಜನ್ಯ ಹೆಸರಲ್ಲಿ ಹೆಲ್ಪ್ ಲೈನ್ ತೆರೆದು ಪುಂಜಾಲಕಟ್ಟೆಯ ಗಾಯಕನಿಗೆ ವಂಚಿಸಿದ ಬೆಂಗಳೂರು ಮಹಿಳೆ! 

Share the Article

Beltangady: ಸೌಜನ್ಯ ಹೆಸರಲ್ಲಿ ಸಂಕಷ್ಟಕ್ಕೊಳಗಾದವರಿಗೆ ಸಹಾಯ ಮಾಡುವುದಾಗಿ ಹೆಲ್ಪ್ ಲೈನ್ ಖಾತೆ ತೆರೆದು ಪುಂಜಾಲಕಟ್ಟೆಯ ಖ್ಯಾತ ಗಾಯಕರೋರ್ವರಿಗೆ ಬೆಂಗಳೂರಿನ ಮಹಿಳೆಯೊಬ್ಬರು ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ಪುಂಜಾಲ್ ಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುಂಜಾಲಕಟ್ಟೆ ನಿವಾಸಿ ವೃತ್ತಿಯಲ್ಲಿ ಗಾಯಕರಾಗಿರುವ ರಾಜೇಶ್ ಅವರು ಅರವಿಂದ ವಿವೇಕ್ ಎಂಬ ಫೇಸ್ಬುಕ್ ಪೇಜಿನಲ್ಲಿ ರಾಜೇಶ್ ಲೈವ್ ಎಂಬ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಆದರೆ ಕಳೆದ 20124ರಲ್ಲಿ ರಾಜೇಶ್ ಅವರಿಗೆ ಬೆಂಗಳೂರಿನ ಸಂಧ್ಯಾ ನಾಗರಾಜ್ ಎಂಬ ಮಹಿಳೆ ಫೇಸ್ಬುಕ್ ಮೂಲಕ ಪರಿಚಯವಾಗಿದ್ದಳೆನ್ನಲಾಗಿದೆ. ಆ ಬಳಿಕ ಸಂಧ್ಯಾ ನಾಗರಾಜ್ ತಾನು ಸೌಜನ್ಯ ಹೆಸರಲ್ಲಿ ಹೆಲ್ಪ್ ಲೈನ್ ತೆರೆದು ವಂಚನೆ ಗೊಳಗಾದವರಿಗೆ ನೆರವು ನೀಡುತ್ತಿದ್ದೇನೆ ಮತ್ತು ಅಮಾ ಕರ ಮೇಲೆ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಹಲವು ಪ್ರಕರಣಗಳನ್ನು ಬಗೆಹರಿಸುತ್ತಿದ್ದೇನೆ ಎಂದು ಗಾಯಕ ರಾಜೇಶರನ್ನು ನಂಬಿಸಿದ್ದಾರೆನ್ನಲಾಗಿದೆ.

ಇದನ್ನು ನಂಬಿದ ರಾಜೇಶ್ ತನ್ನ ಮೇಲೆ ಬಂಟ್ವಾಳ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಬಗ್ಗೆ ಸಂಧ್ಯ ನಾಗರಾಜರಲ್ಲಿ ತಿಳಿಸಿ ಈ ಪ್ರಕರಣವನ್ನು ವಿಲೇವಾರಿ ಮಾಡಬೇಕೆಂದು ಕೇಳಿಕೊಂಡಿದ್ದರು. ಇದಕ್ಕೆ ಒಪ್ಪಿದ ಸಂಧ್ಯ ನಾಗರಾಜ್ ಈ ಪ್ರಕರಣವನ್ನು ಹೈಕೋರ್ಟ್ ಮೂಲಕ ಬಗೆಹರಿಸುವುದಾಗಿ ನಂಬಿಸಿ ಹಂತ ಹಂತವಾಗಿ ರಾಜೇಶರ ಕೈಯಿಂದ 3.20 ಲಕ್ಷ ರೂಪಾಯಿ ಪಡೆಕೊಂಡಿದ್ದರೆನ್ನ ಲಾಗಿದೆ.ಆದರೆ ಇಷ್ಟು ಹಣ ನೀಡಿದರೂ ಈವರೆಗೂ ಸಮಸ್ಯೆ ಬಗೆಹರಿಯದ ಕಾರಣ ಇತ್ತೀಚೆಗೆ ರಾಜೇಶ್ ಅವರು ಈ ಬಗ್ಗೆ ಸಂಧ್ಯಾದಲ್ಲಿ ಪ್ರಶ್ನಿಸಿದ್ದರೆ ನ್ನಲಾಗಿದೆ.

ಆದರೆ ಆಗ ಸಂದ್ಯಾ ನಾಗರಾಜು ಇದಕ್ಕಾಗಿ ಇನ್ನೂ ಕೂಡ ಹೆಚ್ಚು ಹಣ ನೀಡುವಂತೆ ಮತ್ತೆ ರಾಜೇಶರಲ್ಲಿ ಡಿಮ್ಯಾಂಡ್ ಮಾಡಿದ್ದರೆನ್ನಲಾಗಿದೆ.ಇದರಿಂದ ಸಂಶಯಗೊಂಡ ರಾಜೇಶ್ ಕೋರ್ಟಿಗೆ ನೀಡಲಾಗಿರುವ ದಾಖಲಾತಿಗಳೆಲ್ಲವನ್ನು ತನಗೆ ವಾಪಸ್ ಕೊಡುವಂತೆ ಕೇಳಿದಾಗ ಸಂಧ್ಯಾ ನಾಗರಾಜ್ ನಾನು ನಿನ್ನ ಕೈ ಕಾಲು ಮುರಿಸು ದಾಗಿ ಬೆದರಿಕೆ ಒಡ್ಡಿದ್ದರೆ ನ್ನಲಾ ಗಿದೆ.ಇದರಿಂದ ನೊಂದ ರಾಜೇಶ್ ಇದೀಗ ಪುಂಜಾಲ್ ಕಟ್ಟೆ ಠಾಣೆಯಲ್ಲಿ ದೂರು ನೀಡಿದ್ದು ಇದರಂತೆ ಬಿ ಎನ್ ಎಸ್ ಆಕ್ಟ್ 318/4 ಮತ್ತು 351/ 2 ಸೆಕ್ಷನ್ ಪ್ರಕಾರ ಸಂಧ್ಯಾ ನಾಗರಾಜ್ ವಿರುದ್ಧ ದೂರು ದಾಖಲಾಗಿರುತ್ತದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:Puttur: ಬಡವರಿಗೆ ನೆರವಾಗಲು ವೇಷ ಧರಿಸುತ್ತಿದ್ದ ಅಣ್ಣಪ್ಪ ವಿಧಿಯಾಟಕ್ಕೆ ಬಲಿ!

Comments are closed.