Murder: ಪತ್ನಿಯ ಮೊಬೈಲ್ ಗೀಳಿನ ಸಿಟ್ಟಿಗೆ ಕತ್ತಿಯಿಂದ ಕಡಿದು ಕೊಲೆ !

Murder: ಪತ್ನಿ ಹೆಚ್ಚಾಗಿ ಮೊಬೈಲ್ ಉಪಯೋಗಿಸುತ್ತಾಳೆಂದು ಸಿಟ್ಟಿನಿಂದ ಪತಿ ಆಕೆಯನ್ನು ಕತ್ತಿಯಿಂದ ಕಡಿದು ಕೊಲೆ (Murder) ಮಾಡಿದ ಘಟನೆ ತಾಲೂಕಿನ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ಜೂ.19ರ ಗುರುವಾರ ರಾತ್ರಿ ನಡೆದಿದೆ.

ಆರೋಪಿ ಗಣೇಶ್ ಪೂಜಾರಿ ವಿಪರೀತ ಮದ್ಯ ವ್ಯಸನ ಚಟವುಳ್ಳವನಾಗಿದ್ದ. ಪತ್ನಿ ರೇಖಾ ಹೆಚ್ಚಾಗಿ ಮೊಬೈಲ್ ಉಪಯೋಗಿಸುತ್ತಾಳೆಂದು ಸಿಟ್ಟಿನಿಂದ ವಿಪರೀತ ಮದ್ಯ ಸೇವನೆ ಮಾಡಿ ಗುರುವಾರ ರಾತ್ರಿ ಮನೆಯಲ್ಲಿ ಆಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಗಣೇಶ್ ಪೂಜಾರಿಯನ್ನು ಬಂಧಿಸಿಲಾಗಿದೆ.
Comments are closed.