Home Crime Crime: ದನದ ಕಾಲು ಕಡಿದ ಪ್ರಕರಣ: ಕಾನೂನು ಕ್ರಮ ಕೈಗೊಳ್ಳಿ ಇಲ್ಲವಾದಲ್ಲಿ ಠಾಣೆ ಮುತ್ತಿಗೆ ಹಾಕಿ...

Crime: ದನದ ಕಾಲು ಕಡಿದ ಪ್ರಕರಣ: ಕಾನೂನು ಕ್ರಮ ಕೈಗೊಳ್ಳಿ ಇಲ್ಲವಾದಲ್ಲಿ ಠಾಣೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ ಹಿಂಜಾವೇ ಎಚ್ಚರಿಕೆ

Hindu neighbor gifts plot of land

Hindu neighbour gifts land to Muslim journalist

Crime: ಮೂಡಬಿದರೆ ತಾಲೂಕಿನ ದರೆಗುಡ್ಡೆ ಗ್ರಾಮದ ಅಯೋಧ್ಯ ನಗರ ಎಂಬಲ್ಲಿ ಇಂದು(ಜೂ.18) ಗೋವಿನ ಕಾಲು ಕಡಿದ ಪ್ರಕರಣ ನಡೆದಿದ್ದು, ಅತ್ಯಂತ ಕ್ರೂರ ಮತ್ತು ಹೇಯ ಕೃತ್ಯವಾಗಿದೆ ಹಾಗೂ ತೀವ್ರವಾಗಿ ಖಂಡಿಸುತ್ತೇವೆ ಎಂದು ಹಿಂದು ಜಾಗರಣ ವೇದಿಕೆ ಗ್ರಾಮಾಂತರ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ತಿಳಿಸಿದ್ದಾರೆ.

ಇದಕ್ಕಿಂತ ಮೊದಲು ಈ ಪ್ರದೇಶದಲ್ಲಿ ಇಂತಹ ಘಟನೆ ನಡೆದಿದ್ದು ಘಟನೆ ಬಗ್ಗೆ ಈ ಬಾರಿ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸದೆ ಹೋದರೆ ಮುಂದಿನ ದಿನಗಳಲ್ಲಿ ಪೊಲೀಸ್ ಠಾಣೆ ಎದುರುಗಡೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ, ಆದುದರಿಂದ ಸಂಬಂಧಪಟ್ಟ ಇಲಾಖೆ ಆರೋಪಿಯನು ಕೂಡಲೇ ಬಂಧಿಸಿ ಕಠಿಣ ಸೆಕ್ಷನ್ ಅಡಿಯಲ್ಲಿ ಕೇಸು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ಆಗ್ರಹಿಸಿದ್ದಾರೆ.