Udupi: ಹುಚ್ಚಾಟ ಮಾಡಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಬೈಕ್ ಸವಾರರು: ಸ್ಥಳೀಯರಿಂದ ರಕ್ಷಣೆ

Udupi: ಕರಾವಳಿಯಾದ್ಯಂತ ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿ ಹಳ್ಳ ಕೊಳ್ಳಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಬೈಕ್ ಸವಾರರಿಬ್ಬರು ತುಂಬಿ ಹರಿಯುತ್ತಿರುವ ನೀರಿನಲ್ಲಿ ಹುಚ್ಚಾಟವಾಡಲು ಹೋಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.

ಇನ್ನು ಈ ಇಬ್ಬರು ಸವಾರರು ಸೇತುವೆ ದಾಟುವ ಸಾಹಸ ಮಾಡಲು ಹೋಗಿ, ಸೇತುವೆ ಮೇಲೆ ಜೋರಾಗಿ ಹರಿಯುತ್ತಿದ್ದ ನೀರಿಗೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಈ ಸಮಯದಲ್ಲಿ ಸಮಯ ಪ್ರಜ್ಞೆಯಿಂದ ಸ್ಥಳೀಯರು ಈ ಯುವಕರನ್ನು ರಕ್ಷಣೆ ಮಾಡಿದ್ದಾರೆ. ಈ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದದ ಒಡಾಕೆರೆಯಲ್ಲಿ ನಡೆದಿದೆ.
Comments are closed.