Allu Arjun: ಸಿಎಂ ರೇವಂತ್‌ ರೆಡ್ಡಿ ಕೈಯಿಂದ ಪ್ರಶಸ್ತಿ ಸ್ವೀಕರಿಸಿದ ನಟ ಅಲ್ಲು ಅರ್ಜುನ್;‌ ಡೈಲಾಗ್‌ ಅಬ್ಬರ

Share the Article

Allu Arjun: ಪುಷ್ಪ-2 ಚಿತ್ರದ ಅಭಿನಯಕ್ಕೆ ಅಲ್ಲು ಅರ್ಜುನ್‌ ಅವರಿಗೆ ತೆಲಂಗಾಣ ಸರಕಾರ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಿದೆ. ಈ ಪ್ರಶಸ್ತಿಯನ್ನು ಅಲ್ಲು ಅರ್ಜುನ್‌ ಅವರಿಗೆ ಸಿಎಂ ರೇವಂತ್‌ ರೆಡ್ಡಿಯವರು ನೀಡಿದ್ದಾರೆ.

ಪುಷ್ಪ-2 ರಿಲೀಸ್‌ ಸಂದರ್ಭದಲ್ಲಿ ಅಲ್ಲು ಅರ್ಜುನ್‌ ಜೈಲಿಗೆ ಕೂಡಾ ಹೋಗಿ ಬಂದಿದ್ದರು. ತೆಲಂಗಾಣದ ಥಿಯೇಟರ್‌ನಲ್ಲಿ ಅಲ್ಲು ಅರ್ಜುನ್‌ ಭೇಟಿ ಕೊಟ್ಟ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿ, ಸಾವಾಗಿತ್ತು. ಈ ಸಂದರ್ಭದಲ್ಲಿ ತೆಲಂಗಾಣ ಸರಕಾರ ಅಲ್ಲು ಅರ್ಜುನ್‌ ಅವರನ್ನ ಬಂಧಿಸಿ ಚಂಚಲಗುಡ್ಡ ಜೈಲಿನಲ್ಲಿ ಇಡಲಾಗಿತ್ತು.

ಇದೀಗ ನಟ ಅಲ್ಲು ಅರ್ಜುನ್‌ಗೆ ಉತ್ತಮ ನಟ ಪ್ರಶಸ್ತಿಯನ್ನು ತೆಲಂಗಾಣ ಸರಕಾರ ನೀಡಿ ಗೌರವಿಸಿದೆ. 2024 – 25ನೇ ಸಾಲಿನ ಗದ್ದರ್ ಅವಾರ್ಡ್‌ಗಳನ್ನು ತೆಲಂಗಾಣ ಸರ್ಕಾರ ಪ್ರಕಟ ಮಾಡಿದ್ದು, ಉತ್ತಮ ನಟ ಪ್ರಶಸ್ತಿ ಅಲ್ಲು ಅರ್ಜುನ್ ಪಾಲಾಗಿದೆ. ಪುಷ್ಪ 2 ಚಿತ್ರದ ನಟನೆಗಾಗಿ ಉತ್ತಮ ನಟ ಪ್ರಶಸ್ತಿ ಲಭಿಸಿದೆ.

ಇದೀಗ ಈ ವಿಷಯ ಚರ್ಚೆಗೆ ಗ್ರಾಸವಾಗಿದೆ. ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಅವರೇ ಅಲ್ಲು ಅರ್ಜುನ್‌ಗೆ ಪ್ರಶಸ್ತಿ ನೀಡಿದ್ದನ್ನು ಅಭಿಮಾನಿಗಳು ಟ್ರೋಲ್‌ ಮಾಡುತ್ತಿದ್ದಾರೆ. ಪುಷ್ಪ 2 ಚಿತ್ರದ ಆಡಿಯೋ ಸಂದರ್ಭ ರೇವಂತ್‌ ರೆಡ್ಡಿ ಹೆಸರು ಹೇಳಿಲ್ಲ ಎನ್ನುವ ಕಾರಣಕ್ಕೆ ಅರೆಸ್ಟ್‌ ಮಾಡಲಾಗಿತ್ತು. ಇದೀಗ ಅದೇ ರೇವಂತ್‌ ರೆಡ್ಡಿ ಇಂದು ಉತ್ತಮ ಪ್ರಶಸ್ತಿಯನ್ನು ಅಲ್ಲು ಅರ್ಜುನ್‌ ಗೆ ನೀಡಿದ್ದಾರೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಟ್ರೋಲ್‌ ಆಗುತ್ತಿದೆ.

Comments are closed.