ಮಹಾಭಾರತದ ಆಸಕ್ತಿಕರ ಕಥೆ: ಮೀನುಗಾರನ ಮಗಳಿಗೆ ಕಣ್ಣು ಹಾಕಿದ್ದ ಕುರು ಸಾಮ್ರಾಜ್ಯದ ಅಧಿಪತಿ!

Share the Article

ಹಸ್ತಿನಾಪುರವನ್ನು ಆಳುತ್ತಿದ್ದ ಕುರು ಸಾಮ್ರಾಜ್ಯದ ಕುಡಿ ಮಹಾರಾಜ ಶಂತನು. ಶಂತನು ಸಾಕ್ಷಾತ್ ದೇವಮಾತೆ ಗಂಗೆಯನ್ನು ವರಿಸಿದ್ದನು ಮತ್ತು ಅವರಿಗೆ 8 ಜನ ಮಕ್ಕಳು. ಅವರಲ್ಲಿ ಒಬ್ಬನು ದೇವವೃತ. ಮಹಾಭಾರತದ ಕಥೆಯ ವಯೋವೃದ್ಧರೇ ಈ ದೇವವೃತ ಅಲಿಯಾಸ್ ಭೀಷ್ಮ.

ಅದೊಂದು ದಿನ ಯಮುನಾ ನದಿಯ ದಡಕ್ಕೆ ಬಂದ ನಂತರ, ಮಹಾರಾಜ ಶಂತನು ನದಿಯ ದಡದಲ್ಲಿ ಒಬ್ಬ ಸುಂದರ ಮಹಿಳೆಯನ್ನು ನೋಡಿ ತನ್ನ ಪರಿಚಯವನ್ನು ಹೇಳಿಕೊಳ್ಳುತ್ತಾನೆ. ಆ ಮಹಿಳೆಯನ್ನು ನೋಡಿದ ಮಹಾರಾಜನು ಆಕೆಯನ್ನು ಕೇಳುತ್ತಾನೆ: “ನೀವು ಯಾರು, ಈ ನದಿಯ ದಡದಲ್ಲಿ ನೀನು ಏನು ಮಾಡುತ್ತಿರುವಿ, ನಿಮ್ಮ ತಂದೆ ಯಾರು? ನೀನು ಯಾರ ಸಹೋದರಿ, ಯಾರ ಮಹಿಳೆ ಎಂದು?

ಆಕೆಯ ಬಿಸುಪು ತೋಳಿನೊಳಗೆ ಹುದುಗಿಕೊಳ್ಳುವ ಆತುರ

ರಾಜ ಶಂತನುವಿನ ಈ ಮಾತುಗಳನ್ನು ಕೇಳಿ, ನದಿಯ ದಡದಲ್ಲಿರುವ ಮಹಿಳೆ ಹೇಳುತ್ತಾಳೆ. “ಮಹಾರಾಜ, ನಾನು ಯಾರ ಮಹಿಳೆಯೂ ಅಲ್ಲ, ನಾನು ನಿಷಾದರಾಜನ ಮಗಳು. ಮತ್ತು ಮತ್ಸ್ಯ ರಾಜನ ಸಹೋದರಿ. ನನ್ನ ಹೆಸರು ಮತ್ಸ್ಯಗಂಧಿ. (ಆಕೆಗೆ ಇನ್ನೊಂದು ಹೆಸರು ಸತ್ಯವತಿ)

ಮತ್ಯಗಂಧ ಬೀಸು ತೋಳಿನ ಬಲಿಷ್ಠ ಯುವತಿಯಾಗಿದ್ದಳು. ಆಕೆಯ ತಂದೆ ಮೀನುಗಾರನಾಗಿದ್ದ ನಿಶಾದರಾಜ ಆಕೆಯನ್ನು ಅಲ್ಲಿ ದೋಣಿ ನಡೆಸಲು ನೇಮಿಸಿದ್ದ. ದೋಣಿಯ ಹುಟ್ಟು ಬೀಸಿ ಬೀಸಿ ಆಕೆಯ ದೇಹ ಹುರಿಗಟ್ಟಿ ಹೊಳಪು ಪಡೆದುಕೊಂಡಿತ್ತು. ಆಕೆಯ ದೇಹ ಪ್ರಕೃತಿ ಶಂತನುವಿನಲ್ಲಿ ಸಂಚಲನವನ್ನು ಉಂಟುಮಾಡಿದ್ದವು. ಹೆಸರೇ ಸೂಚಿಸುವಂತೆ ಆಕೆಯ ದೇಹದಿಂದ ಮೀನು ಗಂಧ ಹೊರ ಸೂಸುತ್ತಿತ್ತು. ಆದರೆ ಆಕೆಯ ದೇಹಾಕರ್ಷಣೆಯ ಮುಂದೆ ಅದು ಹಿತವಾದ ಪರಿಮಳವನ್ನು ರಾಜನಿಗೆ ನೀಡಿತ್ತು. ಹೇಗಾದರೂ ಮಾಡಿ ಆಕೆಯನ್ನು ಮದುವೆಯಾಗಬೇಕು ಅನ್ನೊದು ಆತನ ತಕ್ಷಣದ ಇರಾದೆಯಾಗಿತ್ತು. ಆತನಿಗೆ ಆಕೆಯ ಬಿಸುಪು ತೋಳಿನ ಒಳಗೆ ಹುದುಗಿ ಕೊಳ್ಳುವ ಆತುರವಿತ್ತು.

ಮತ್ಸ್ಯಗಂಧಿ ಮೇಲೆ ಆಕರ್ಷಿತನಾಗಿ ಆಕೆಯನ್ನು ತನ್ನ ಹೆಂಡತಿಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದ ನಂತರ ಶಂತನು, “ನಾನು ನಿನ್ನ ಮದುವೆಯಾಗಲು ಬಯಸುತ್ತೇನೆ, ನಿನ್ನನ್ನು ನನ್ನ ರಾಜ್ಯದ ರಾಣಿಯನ್ನಾಗಿ ಮಾಡುತ್ತೇನೆ. ನನ್ನ ಹೆಂಡತಿ ಗಂಗಾ ನನ್ನನ್ನು ತೊರೆದ ಕಾರಣ ನಾನು ಈಗ ಸ್ತ್ರೀಯಿಲ್ಲದೆ ಬದುಕುತ್ತಿದ್ದೇನೆ” ಎಂದು ನೇರವಾಗಿ ಹೇಳಿತ್ತಾನೆ. ರಾಜನ ಮಾತುಗಳನ್ನು ಕೇಳಿದ ಮತ್ಸ್ಯಗಂಧ, “ಮಹಾರಾಜ, ಈ ಮದುವೆಗೆ ನನಗೆ ಯಾವುದೇ ಅಭ್ಯಂತರವಿಲ್ಲ, ಆದರೆ ನಾನು ಈ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರಳಲ್ಲ. ದಯವಿಟ್ಟು ನನ್ನ ತಂದೆಯನ್ನು ಕೇಳಿ. ಅವರು ಒಪ್ಪಿದರೆ, ನಾನು ಖಂಡಿತವಾಗಿಯೂ ನಿಮ್ಮನ್ನು ಮದುವೆಯಾಗುತ್ತೇನೆ” ಎಂದು ಹೇಳುತ್ತಾಳೆ.

ಮಹಾರಾಜ ಶಂತನು, ಮತ್ಸ್ಯಗಂಧಿಯ ತಂದೆ ನಿಷಾದ ರಾಜ ವಾಸಿಸುತ್ತಿದ್ದ ಸ್ಥಳಕ್ಕೆ ಹೋಗಿ ನೋಡುತ್ತಾನೆ: ಅದು ಶುದ್ಧ ಮೀನು ಮಾರ್ಕೆಟ್ ಅಲ್ಲದೇ ಬೇರೇನೂ ಆಗಿರಲಿಲ್ಲ. ಖುದ್ದು ಮಹಾರಾಜ ತನ್ನ ಸ್ಥಳಕ್ಕೆ ಭೇಟಿ ನೀಡುವುದನ್ನು ನೋಡಿ ಮತ್ಸ್ಯಗಂಧನ ತಂದೆ ಗಾಬರಿ ಪಡುತ್ತಾನೆ. ಯಾಕೆಂದರೆ ತನ್ನ ಮುಂದೆ ಇರೋದು ಭರತವಂಶದ ಬೃಹತ್ ಕುರು ಸಾಮ್ರಾಜ್ಯದ ಅಧಿಪತಿ! ನಿಶಾದ ರಾಜ ತುಂಬಾ ಸಂಭ್ರಮಪಟ್ಟು ಶಂತನುವನ್ನು ಸನ್ಮಾನಿಸಿದ. ಗೌರವವನ್ನು ಪಡೆದ ನಂತರ, ರಾಜ ಶಂತನು, “ನಾನು ನಿನ್ನನ್ನು ಏನನ್ನಾದರೂ ಕೇಳಲು ಇಲ್ಲಿಗೆ ಬಂದಿದ್ದೇನೆ, ನೀನು ಇಲ್ಲ ಎಂದು ಹೇಳುವುದಿಲ್ಲ ಎಂದು ಭಾವಿಸುತ್ತೇನೆ” ಎಂದು ಹೇಳುತ್ತಾನೆ. ರಾಜ ಮತ್ಸ್ಯಗಂಧಿಯ ತಂದೆ, “ಮಹಾರಾಜ, ಆ ವಸ್ತುಗಳು ಕೊಡಲು ಯೋಗ್ಯವಾಗಿದ್ದರೆ ಅವುಗಳನ್ನು ನೀಡಬೇಕು, ನೀನು ಅಂತಹ ವಸ್ತುವನ್ನು ನನ್ನಿಂದ ಕೇಳಿದರೆ, ನಾನು ಖಂಡಿತವಾಗಿಯೂ ಇಲ್ಲ ಎಂದು ಹೇಳುವುದಿಲ್ಲ” ಎಂದು ಹೇಳುತ್ತಾನೆ.

ಆಗ ರಾಜ ಶಂತನು ತನ್ನ ಮನಸ್ಸಿನಲ್ಲಿರುವುದನ್ನು ಮತ್ಸ್ಯಗಂಧನ ತಂದೆಗೆ ಹೇಳಿದ. ರಾಜನ ಮಾತನ್ನು ಕೇಳಿದ ನಂತರ, ಮತ್ಸ್ಯಗಂಧಿ ತಂದೆ ಹೇಳಿದ, “ನನ್ನ ಮಗಳನ್ನು ನಿನಗೆ ಒಪ್ಪಿಸುವುದು ನನಗೆ ತುಂಬಾ ಸಂತೋಷದ ವಿಷಯ, ನಾನು ಇದಕ್ಕೆ ಸಿದ್ಧನಿದ್ದೇನೆ. ಆದರೆ…!!” ಎಂದು ಅರೆ ಕ್ಷಣ ಮೌನವಾಗುತ್ತಾನೆ ಅಪ್ಪ.

ಮತ್ಸ್ಯಗಂಧಿಯ ತಂದೆ ಆ ಸಂಭ್ರಮದ, ಗಾಬರಿಯ ಸನ್ನಿವೇಶದಲ್ಲಿ ಕೂಡಾ ಮೈ ಮರೆಯಲಿಲ್ಲ. ಆತನ ಪುತ್ರಿಯನ್ನು ಕುರು ಚಕ್ರಾಧಿಪತಿ ಮದುವೆ ಆಗುತ್ತಿದ್ದಾನಲ್ಲ ಎನ್ನುವ ಖುಷಿಯಲ್ಲಿ ತಕ್ಷಣ, ‘ಹಾಗೆಯೇ ಆಗಲಿ ಬುದ್ಧಿ’ ಎನ್ನಲಿಲ್ಲ.

ಆಕೆಯ ಅಪ್ಪ ಹೇಳ್ತಾನೆ, “ನಿಮಗೆ ನನ್ನ ಮಗಳನ್ನು ಖಂಡಿತ ಕೊಡುತ್ತೇನೆ, ಆದರೆ ಮತ್ಸ್ಯಗಂಧಿಯ ಮಗ ಮಾತ್ರ ನಿಮ್ಮ ಉತ್ತರಾಧಿಕಾರಿಯಾಗಬೇಕು ಎಂಬ ಷರತ್ತು ನನ್ನದು. ಅಂತಹ ಒಂದೇ ಒಂದು ಷರತ್ತಿಗೆ, ನೀವು ಒಪ್ಪುವುದಾದರೆ ನನ್ನ ಮಗಳನ್ನು ನಿಮಗೆ ಕೊಡುತ್ತೇನೆ” ಎಂದು ಕಡ್ಡಿ ಮುರಿದಂತೆ ಹೇಳಿದ.

ಮತ್ಸ್ಯಗಂಧಿಯ ತಂದೆಯ ಮಾತನ್ನು ಕೇಳಿದ ರಾಜ ಶಂತನು ನಿರಾಶೆಗೊಂಡ. ಏಕೆಂದರೆ ಅವನು ಈಗಾಗಲೇ ತನ್ನ ಮಗ, ಅಂಬೆಯ ಪುತ್ರ ದೇವವ್ರಥನನ್ನು (ಭೀಷ್ಮನನ್ನು) ತನ್ನ ಉತ್ತರಾಧಿಕಾರಿ ಎಂದು ಘೋಷಿಸಿದ್ದ. ಅದೇ ನಿರಾಶೆಯಲ್ಲಿ ಆತ ಅಲ್ಲಿಂದ ತನ್ನ ರಾಜಧಾನಿಗೆ ಹಿಂತಿರುಗಿದ. ರಾಜಧಾನಿಗೆ ಬಂದ ನಂತರ, ರಾಜ ಅನ್ಯ ಮನಸ್ಕನಾದ. ಆತನಿಗೆ ಯಾವುದೇ ಚಟುವಟಿಕೆಗಳಲ್ಲಿ ಆಸಕ್ತಿ ಇರಲಿಲ್ಲ. ಪದೇ ಪದೇ ಬೀಸು ನೋಟದ ಮತ್ಸ್ಯಗಂಧಿ ಆತನ ಕಣ್ಣ ಮುಂದೆ ಬಂದು ನಿಲ್ಲುತ್ತಿದ್ದಳು. ಆಕೆಯ ದೇಹದ ಮೀನು ಭರಿತ ವಾಸನೆ ಆತನಲ್ಲಿ ಘಮವನ್ನು ಉಂಟುಮಾಡುತ್ತಿತ್ತು.

ತನ್ನ ತಂದೆ ಹೀಗೆ ನಿರಾಶೆಗೊಂಡಿರುವುದನ್ನು ನೋಡಿ ದೇವವ್ರಥನು (ಭೀಷ್ಮ), “ತಂದೆಯೇ, ದಯವಿಟ್ಟು ನಿಮಗೆ ಏನು ತೊಂದರೆ ಕೊಡುತ್ತಿದೆ ಎಂದು ಹೇಳಿ, ನಾನು ಈಗ ಆ ಸಮಸ್ಯೆಯನ್ನು ಪರಿಹರಿಸುತ್ತೇನೆ” ಎಂದು ಕೇಳಿದ. ಮಗ ಏನಂದಾನೋ ಹಿಂಜರಿಕೆಯಿಂದ, ಶಂತನು ತನ್ನ ಮಗನಿಗೆ ಮತ್ಸ್ಯಗಂಧಿಯನ್ನು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ. ದೇವವ್ರಥನಿಗೆ ತನ್ನ ತಂದೆಯಿಂದ ಯಾವುದೇ ಉತ್ತರ ಸಿಗಲಿಲ್ಲವಾದ ಕಾರಣ, ಆತ ಮಂತ್ರಿಗಳ ಬಳಿಗೆ ಹೋಗಿ, “ಮಂತ್ರಿಗಳೇ, ನೀವು ಈಗ ನನ್ನ ತಂದೆಯ ಬಳಿಗೆ ಹೋಗಿ ಅವರನ್ನು ಅವರ ಈಗಿನ ಸಮಸ್ಯೆ ಮತ್ತು ದುಃಖದ ಕಾರಣವನ್ನು ನನಗೆ ತಿಳಿಸಿ. ನಾನು ಶೀಘ್ರದಲ್ಲೇ ಅವರ ದುಃಖವನ್ನು ನಿವಾರಿಸಲು ಪ್ರಯತ್ನಿಸುತ್ತೇನೆ” ಎಂದು ಹೇಳಿದ ದೇವವ್ರಥ (ಭೀಷ್ಮ).

ರಾಜನ ಬಳಿಗೆ ಹೋಗಿ ಮಂತ್ರಿಗಳು ಮತ್ಸ್ಯಗಂಧಳ ಬಗ್ಗೆ ಎಲ್ಲವನ್ನೂ ತಿಳಿದುಕೊಂಡು ಅದನ್ನು ಯಥಾವತ್ತಾಗಿ ಯುವರಾಜ ದೇವವ್ರತನಿಗೆ ಮಂತ್ರಿ ವರದಿ ಒಪ್ಪಿಸುತ್ತಾನೆ. ತಾನು ರಾಜನಾಗಬಾರದು ಅಂದಾಗ ಆ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ ಒರೆಯಿಂದ ಕತ್ತಿ ಹೊರ ಬಂದು ಝಳಪಿಸಿ ಮತ್ಸ್ಯ ರಾಜ ನಿಷಾದ ರಾಜನ ರುಂಡ ಸೀಳುತ್ತಿತ್ತು. ಆದರೆ ಅಲ್ಲಿದ್ದುದ್ದು ಕುರು ಸಾಮ್ರಾಟನ ಪುತ್ರ ಭೀಷ್ಮ(ದೇವ ವೃತ)!!

ಇದಾದ ನಂತರ, ಭೀಷ್ಮನು ಮತ್ಸ್ಯಗಂಧಿಯ ತಂದೆಯ ಬಳಿಗೆ ಹೋಗಿ ಅವನಿಗೆ, “ಓ ಕೇವತರಾಜ, ಮತ್ಸ್ಯಗಂಧಿಯ ಮಗ ಹಸ್ತಿನಾಪುರದ ರಾಜನಾಗಬೇಕೆಂದು ನೀನು ಬಯಸಿದರೆ, ನಾನು ಎಂದಿಗೂ ಹಸ್ತಿನಾಪುರದ ರಾಜನಾಗುವುದಿಲ್ಲ ಎಂದು ಭರವಸೆ ನೀಡುತ್ತೇನೆ” ಎಂದು ಹೇಳುತ್ತಾನೆ. ದೇವವೃತನು ಹಾಗೆ ನಿಷಾದರಾಜನಿಗೆ ಪ್ರತಿಜ್ಞೆ ಮಾಡಿದರೂ ಕೂಡಾ ನಿಷಾದ ರಾಜ ಅನುಮಾನ ವ್ಯಕ್ತಪಡಿಸುತ್ತಾನೆ. “ನೀನು (ಭೀಷ್ಮ) ರಾಜನಾಗುವುದಿಲ್ಲ ಸರಿ, ಆದರೆ ನಿನ್ನ (ದೇವವೃತ/ಭೀಷ್ಮನ) ಮಗ ಮತ್ಸ್ಯಗಂಧಿಯ ಮಗನಿಂದ ಬಲವಂತವಾಗಿ ರಾಜ್ಯವನ್ನು ಕಸಿದುಕೊಂಡರೆ ಏನಾಗುತ್ತದೆ?” ಅನ್ನುತ್ತಾನೆ ನಿಷಾದ ರಾಜ. ಇದನ್ನು ಕೇಳಿದ ದೇವವ್ರಥನು, “ಇಂದು ನಾನು ನನ್ನ ತಾಯಿ ಗಂಗೆಯನ್ನು ಸಾಕ್ಷಿಯಾಗಿಟ್ಟುಕೊಂಡು ಪ್ರತಿಜ್ಞೆ ಮಾಡುತ್ತೇನೆ, ನಾನು ಮದುವೆಯಾಗುವುದಿಲ್ಲ ಮತ್ತು ಆಜೀವ ಬ್ರಹ್ಮಚರ್ಯವನ್ನು ಆಚರಿಸುತ್ತೇನೆ” ಎಂದು ಹೇಳುತ್ತಾನೆ. ಅದುವೇ ಭೀಷ್ಮ ಪ್ರತಿಜ್ಞೆ!

ದೇವರಥನ ಈ ಪ್ರತಿಜ್ಞೆಯನ್ನು ಕೇಳಿದ ಮತ್ಸ್ಯಗಂಧನ ತಂದೆ ತನ್ನ ಮಗಳನ್ನು ಶಂತನುವಿಗೆ ಮದುವೆ ಮಾಡುತ್ತಾನೆ ಮತ್ತು ತನ್ನ ಮಗ ದೇವರಥನ ಈ ಪ್ರತಿಜ್ಞೆಯನ್ನು ಕೇಳಿದ ನಂತರ ರಾಜ ಶಂತನು ಅವನಿಗೆ ಭೀಷ್ಮ ಎಂದು ಮರು ಹೆಸರಿಸುತ್ತಾನೆ. ಶಂತನು ಮತ್ತು ಮತ್ಸ್ಯಗಂಧಿ (ಸತ್ಯವತಿಯ) ವಿವಾಹ ನಡೆದದ್ದು ಹಾಗೆ. ಹೀಗೆ ಭೀಷ್ಮ ಎಂಬ, ತನ್ನ ಕಡು ಕಾಮನೆಯನ್ನು ಹತ್ತಿಕ್ಕಿ ಅಪ್ಪನಿಗಾಗಿ ಬದುಕಿದ ಕಠೋರ ಪ್ರತಿಜ್ಞೆಯ ವ್ಯಕ್ತಿ ತ್ಯಾಗದ ಪ್ರತಿರೂಪವಾಗಿ ಮಹಾಭಾರತದ ಮೂಲಕ ಮನಸ್ಸನ್ನು ತಟ್ಟುತ್ತಾನೆ. ಪುರಾಣ ಇತಿಹಾಸ ಮತ್ತು ಜನಮಾನಸದಲ್ಲಿ ಅಜರಾಮರವಾಗಿ ಬಾಳುತ್ತಾನೆ ಈ ಇಚ್ಚಾಮರಣಿ!

Comments are closed.