Sullia: ಸುಳ್ಯದಲ್ಲಿ ಯುವಕರ ಗುಂಪುಗಳ ನಡುವೆ ಹೊಡೆದಾಟ: ಐವರು ಪೊಲೀಸ್‌ ವಶಕ್ಕೆ!

Share the Article

Sullia: ಸುಳ್ಯ (Sullia) ನಗರದಲ್ಲಿ ಗಸ್ತು ತಿರುಗುತ್ತಿದ್ದ ಉಪನಿರೀಕ್ಷಕಿ (ಎಸ್‌ಐ) ಸರಸ್ವತಿ ಹಾಗೂ ಅವರ ಸಿಬ್ಬಂದಿ, ವಿವೇಕಾನಂದ ಸರ್ಕಲ್ ಬಳಿ ಗುಂಪೊಂದು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು ಗಮನಿಸಿ, ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್‌ ತಂಡವು, ಪರಿಸ್ಥಿತಿಯನ್ನು ನಿಯಂತ್ರಿಸಿ ಹೊಡೆದಾಟದಲ್ಲಿ ಭಾಗಿಯಾಗಿದ್ದ ಐವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದವರನ್ನು ಮಹಮ್ಮದ್ ರಾಶಿಕ್ (19), ಮಹಮ್ಮದ್ ಸುನೈಪ್ (23), ಆಶಿಕ್ (22), 3 (21) ಮತ್ತು ಆದಿತ್ಯನ್ (20) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸ್ಥಳೀಯ ನಿವಾಸಿಗಳೆಂದು ತಿಳಿದುಬಂದಿದೆ.

ಎಸ್‌ಐ ಸರಸ್ವತಿ ಅವರ ದೂರಿನ ಮೇರೆಗೆ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಶಕ್ಕೆ ಪಡೆದ ಯುವಕರ ವಿಚಾರಣೆ ಮುಂದುವರೆದಿದೆ.

Comments are closed.