Malpe: ಮಲ್ಪೆ: 2 ಲಕ್ಷ ರೂ. ಮೌಲ್ಯದ ಚಿನ್ನ ಮರಳಿಸದೆ ಹೆತ್ತ ತಾಯಿಗೆ ಮಗಳಿಂದ ವಂಚನೆ!

Malpe: ಗಂಡನಿಗೆ ಕುಡಿತದ ಚಟವಿದ್ದು ಹಣ ಹಾಳು ಮಾಡುತ್ತಾರೆ ಎಂಬ ಕಾರಣದಿಂದ ಅವರು ತನ್ನ ಬಳಿ ಇದ್ದ ಚಿನ್ನ ಮತ್ತು ಹಣವನ್ನು ತನ್ನ ಮಗಳು ಅಫ್ರೀನ್ ಬಳಿ ಇರಿಸಿಕೊಳ್ಳಲು ಕೊಟ್ಟಿದ್ದರು. ಆದ್ರೆ 2 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಆಕೆ ಮರಳಿ ಕೊಡದೆ ವಂಚಿಸಿರುವ ಬಗ್ಗೆ ತಾಯಿ ಮಲ್ಪೆ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತ ಮಹಿಳೆಯನ್ನು ಹೂಡೆಯ ಜಮೀಲಾ ಎಂದು ಗುರುತಿಸಲಾಗಿದೆ.
ಅಮ್ಮ ನೀಡಿದ್ದ ಹಣವನ್ನು ಮಗಳು ಬಡ್ಡಿಗೆ ಇತರರಿಗೆ ನೀಡಿದ್ದಳು. ಈ ವಿಚಾರ ತಿಳಿದ ತಾಯಿ ಜಮೀಲಾ ಅವರು ಚಿನ್ನ ಮತ್ತು ನಗದನ್ನು ವಾಪಸು ಕೇಳಿದ್ದರು. ಆಗ ಹಣವನ್ನು ಮಾತ್ರ ಮರಳಿಸಿದ ಅಫ್ರೀನ್, ಚಿನ್ನ ತನ್ನ ಗಂಡ ಮೊಹಮ್ಮದ್ ಖುರೇಶ್ ಬಳಿ ಇದೆ ಎಂದು ಹೇಳಿದ್ದಳು. ಮಗಳು ಮತ್ತು ಅಳಿಯ ಇಬ್ಬರೂ ಸೇರಿಕೊಂಡು ನನ್ನ ಚಿನ್ನಾಭರಣವನ್ನು ಮರಳಿಸದೆ ವಂಚನೆ ಮಾಡಿದ್ದಾರೆ ಎಂದು ಜಮೀಲಾ ಅವರು ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರಿನಂತೆ ಮಲ್ಪೆ (Malpe) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.