ಉಜಿರೆ: ರಿಕ್ಷಾ ತೊಳೆಯುತ್ತಿದ್ದಾಗ ವಿದ್ಯುತ್ ಆಘಾತಕ್ಕೊಳಗಾದ ಯುವಕನನ್ನು ಪ್ರಾಣಪಾಯದಿಂದ ರಕ್ಷಿಸಿದ ಆಪತ್ಬಾಂಧವ ಸಮಾಜ ಸೇವಕರು!

Share the Article

ಉಜಿರೆ: ಉಜಿರೆಯ ಟಿಬಿ ಕ್ರಾಸ್ ಬಳಿ ವಾಟರ್ ಗನ್ ಮೂಲಕ ರಿಕ್ಷಾ ತೊಳೆಯುತ್ತಿದ್ದ ಯುವಕನೂರ್ವನಿಗೆ ಅದೇ ವಾಟರ್ ಗನ್ ನಿಂದ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಅದರಲ್ಲೇ ಸಿಲುಕಿ ಒದ್ದಾಡುತ್ತಿದ್ದ ಯುವಕನನ್ನು ಮೂವರು ಸಮಾಜ ಸೇವಕರು ತಮ್ಮ ಪ್ರಾಣದ ಹಂಗನ್ನು ತೊರೆದು ಬಹಳ ಚಾಣಾಕ್ಷತೆಯಿಂದ ವಾಟರ್ ಗನ್ನಲ್ಲಿ ಸಿಲುಕಿಕೊಂಡಿದ್ದ ಯುವಕನನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.

ಉಜಿರೆ ಟಿಬಿ ಕ್ರಾಸ್ ನಿವಾಸಿ ಸಾಧಿಕ್ ಎಂಬವರೇ ರಕ್ಷಾ ತೊಳಿಯುತ್ತಿದ್ದ ವೇಳೆ ದಿಡೀರ್ ವಾಟರ್ ಗನ್ ನ ವಿದ್ಯುತ್ ಶಾಕ್ ಗೆ ಒಳಗಾಗಿ ಅಪಾಯದಲ್ಲಿ ಸಿಲುಕಿ ಒದ್ದಾಡುತ್ತಿದ್ದರು. ಆದರೆ ಈ ವಿಚಾರ ತಿಳಿದು ಆಪತ್ಬಾಂಧವರು ಎಂಬ ಖ್ಯಾತಿಗೆ ಒಳಗಾದ ಟಿಬಿ ಕ್ರಾಸನ ಸಮಾಜಸೇವಕರಾದ ಉಸ್ಮಾನ್ ,ಮನ್ಸೂರ್ ಮತ್ತು ಹಮೀದ್ ಎಂಬವರು ತಕ್ಷಣ ಸ್ಥಳಕ್ಕೆ ಧಾವಿಸಿ, ತಮ್ಮ ಪ್ರಾಣದ ಹಂಗನ್ನು ತೊರೆದು ಬಹಳ ಚಾಣಾಕ್ಷತೆಯಿಂದ ಯುವಕನನ್ನು ರಕ್ಷಿಸಿ ತಮ್ಮದೇ ವಾಹನದಲ್ಲಿ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಣಪಾಯದಿಂದ ಪಾರು ಮಾಡಿದ್ದಾರೆ. ಆಪತ್ಬಾಂಧವರಾದ ಈ ಸಮಾಜ ಸೇವಕರ ಸಕಾಲಿಕ ಪ್ರಯತ್ನದಿಂದಾಗಿ ಅಮಾಯಕ ಬಡಜೀವವೊಂದು ಇದೀಗ ಬದುಕುಳಿದಂತಾಗಿದ್ದು ಇವರ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

*************************

Comments are closed.