Udupi: ಉಡುಪಿ: ಅಂಗಡಿಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ! ಓರ್ವ ಅರೆಸ್ಟ್!

Udupi: ಸರ್ಕಾರದ ಉಚಿತ ಯೋಜನೆಗಳ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ದಾಸ್ತಾನಿಟ್ಟಿದ್ದ ಆರೋಪದ ಮೇಲೆ ಓರ್ವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಈ ಘಟನೆ ಹಿರಿಯಡ್ಕದ ಬೊಮ್ಮರಬೆಟ್ಟು ಗ್ರಾಮದ ಮಾಂಬೆಟ್ಟು ಎಂಬಲ್ಲಿ ನಡೆದಿದೆ. ವಾಸುದೇವ ಪ್ರಭು ಬಂಧಿತ ಆರೋಪಿ. ಅಕ್ಕಿ ದಾಸ್ತಾನಿಟ್ಟಿರುವ ಮಾಹಿತಿ ಮೇರೆಗೆ ಉಡುಪಿಯ ಆಹಾರ ನಿರೀಕ್ಷಕರು ಹಿರಿಯಡ್ಕ ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿದ್ದಾರೆ.
ಆರೋಪಿಯ ಪ್ರಭು ಜನರಲ್ ಸ್ಟೋರ್ ಗೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಒಂದು ಲಕ್ಷಕ್ಕೂ ಅಧಿಕ ರೂಪಾಯಿ ಮೌಲ್ಯದ ಐವತ್ತೈದು ಕ್ವಿಂಟಾಲ್ ಅರ್ವತ್ತು ಕೆಜಿ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Comments are closed.