Saalumarada Timmakka: ಸಾಲುಮರದ ತಿಮ್ಮಕ್ಕ ಬಯೋಪಿಕ್: ತಿಮ್ಮಕ್ಕ ಪಾತ್ರದಲ್ಲಿ ಮಿಂಚಲಿದ್ದಾರೆ ನಟಿ ಸೌಜನ್ಯ

Share the Article

Saalumarada Timmakka: ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರ ಕುರಿತಾಗಿ ಈಗಾಗಲೇ ಹಲವು ಪುಸ್ತಕಗಳಿದ್ದು, ಇದೆ ಮೊದಲ ಬಾರಿಗೆ ಅವರ ಬಯೋಪಿಕ್ ಸಿನಿಮಾ ಆಗಿ ತೆರೆಮೇಲೆ ಬರಲಿದೆ.

ಹಾಗೂ ನಟಿ ಸೌಜನ್ಯ ಅವರು ಸಾಲುಮರದ ತಿಮ್ಮಕ್ಕನ ಪಾತ್ರದಲ್ಲಿ ನಟಿಸುತ್ತಿದ್ದು, ಒರಟ ಶ್ರೀ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿದಿದ್ದು, ಒರಟ ಶ್ರೀ ಈ ಸಿನಿಮಾಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ.

ಶ್ರೀಲಕ್ಷ್ಮಿ ವೆಂಕಟೇಶ್ವರ ಪಿಕ್ಚರ್ಸ್’ ಬ್ಯಾನರ್ ಮೂಲಕ ದಿಲೀಪ್ ಕುಮಾರ್ ಎಚ್.ಆರ್., ಸೌಜನ್ಯ ಡಿ.ವಿ, ಎ. ಸಂತೋಷ್ ಮುರಳಿ, ಒರಟ ಶ್ರೀ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರು ಬರೆದಿರುವ ‘ವೃಕ್ಷಮಾತೆ ಸಾಲುಮರದ ತಿಮ್ಮಕ್ಕ’ ಕೃತಿಯನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗುತ್ತಿದೆ. ಹಾಗೂ ತಿಮ್ಮಕ್ಕನ ಗಂಡನ ಪಾತ್ರವನ್ನು ನೀನಾಸಂ ಅಶ್ವಥ್ ಅವರು ಮಾಡುತ್ತಿದ್ದಾರೆ. ಎಂ.ಕೆ. ಮಠ, ಗಣೇಶ್ ಕೆ. ಸರ್ಕಾರ್, ಮನು, ದೀಪಾ ಡಿ.ಕೆ. ಅಂಜನಮ್ಮ, ಪ್ರಕಾಶ್ ಶೆಟ್ಟಿ, ಭೂಮಿಕಾ ಮುಂತಾದವರು ಈ ಚಿತ್ರದಲ್ಲಿ ಪಾತ್ರವಹಿಸಲಿದ್ದಾರೆ.

Comments are closed.