General Knowledge: ಜಗತ್ತಿನ ಅತ್ಯಂತ ಪುಟ್ಟ ದೇಶ ಇದು: ಇಲ್ಲಿರುವುದು 33 ಜನ ಮಾತ್ರ

Share the Article

General knowledge: ಭಾರತ ಈಗಾಗಲೇ ಸಂಖ್ಯೆಯಲ್ಲಿ ನಂ.1 ದೇಶವಾಗಿ ಹೊರಹೊಮ್ಮಿದೆ. ಆದ್ರೆ ಇಲ್ಲೊಂದು ದೇಶದಲ್ಲಿ ಕೇವಲ 33 ಜನ ಇದಾರಂತೆ. ಈ ದೇಶವು ಅಮೆರಿಕದ ನೆವಾಡಾ ರಾಜ್ಯದ ಮರುಭೂಮಿಯಲ್ಲಿರುವ “ರಿಪಬ್ಲಿಕ್ ಆಫ್ ಮೊಲೊಸಿಯಾ” ಎಂಬ ಸೂಕ್ಷ್ಮ ರಾಷ್ಟ್ರವಾಗಿದೆ.

ಆದರೆ, ಯಾವುದೇ ದೇಶ ಅಥವಾ ಅಂತರರಾಷ್ಟ್ರೀಯ ಸಂಸ್ಥೆಯಿಂದ ಇದುವರೆಗೂ ಅಧಿಕೃತವಾಗಿ ಗುರುತಿಸಲ್ಪಟ್ಟಿಲ್ಲವಾದರೂ, ಇದು ತನ್ನದೇ ಆದ ಧ್ವಜ, ರಾಷ್ಟ್ರಗೀತೆ, ಕರೆನ್ಸಿ, ಕಾನೂನುಗಳು ಮತ್ತು ಸಂವಿಧಾನವನ್ನು ಹೊಂದಿದೆ. ಹಾಗಾಗಿ, ಈ ವಿಶಿಷ್ಟ ಸ್ಥಳವು ವಿಶ್ವದ ಕುತೂಹಲಕಾರಿ ಸ್ಥಳಗಳಲ್ಲಿ ಒಂದಾಗಿದೆ ಎಂದು ಹೇಳಬಹುದಾಗಿದೆ. ಈ ದೇಶವನ್ನು 1977 ರಲ್ಲಿ ಕೆವಿನ್ ಬಾಗ್ ಮತ್ತು ಅವರ ಸ್ನೇಹಿತರಾದ ಜೇಮ್ಸ್ ಸ್ಪೀಲ್ಮನ್ ಎಂಬವರು ಸ್ಥಾಪಿಸಿದರು. ಈ ಕನಸು ಮೂಲತಃ ಇಬ್ಬರು ಯುವಕರ ತಮಾಷೆಯ ಯೋಜನೆಯಾಗಿ ಆರಂಭವಾಗಿದ್ದಾಗಿತ್ತು. ಆದರೆ ಈ ದೇಶ ಕೇವಲ 6.3 ಎಕರೆ ವಿಸ್ತೀರ್ಣವನ್ನು ಹೊಂದಿದ್ದು, ಇದು ವಿಶ್ವದ ಅತ್ಯಂತ ಚಿಕ್ಕ “ದೇಶ”ಗಳಲ್ಲಿ ಒಂದಾಗಿದೆ.

ದೇಶದ ರಾಜಧಾನಿಯು “ಬಾಗ್‌ವಿಲ್ಲೆ” ಎಂಬ ಸಣ್ಣ ಪ್ರದೇಶವಾಗಿದ್ದು, ಇಲ್ಲಿ ವಲೋರಾ” ಎಂಬ ಕರೆನ್ಸಿಯನ್ನು ಬಳಸಲಾಗುತ್ತೆ. ಇಲ್ಲಿ ಪ್ರತ್ಯೇಕ ರಾಷ್ಟ್ರಗೀತೆ (“ಮೊಲೊಸಿಯಾ, ದಿ ಲ್ಯಾಂಡ್ ಆಫ್ ಫ್ರೀ”), ಮತ್ತು ಧ್ವಜವಿದೆ. ಇಲ್ಲಿ ಕೆಲವೊಂದು ವಿಚಿತ್ರ ಕಾನೂನುಗಳಿದ್ದು, ಉದಾಹರಣೆಗೆ, ಈರುಳ್ಳಿ, ವಾಲ್‌ರಸ್‌ಗಳು ಮತ್ತು ಕ್ಯಾಟ್‌ಫಿಶ್‌ಗಳನ್ನು ನಿಷೇಧಿಸಲಾಗಿದೆ. ಇನ್ನೂ ಮೊಲೊಸಿಯಾದಲ್ಲಿ ಒಂದು ಸಣ್ಣ ಅಂಗಡಿ, ಗ್ರಂಥಾಲಯ, ಕಸ್ಟಮ್ಸ್ ಆಫೀಸ್, ಮತ್ತು ಸ್ಮಶಾನವಿದೆ. ಇವೆಲ್ಲವನ್ನೂ ಕೆವಿನ್ ಮತ್ತು ಅವರ ಕುಟುಂಬವು ಸ್ವತಃ ನಿರ್ವಹಿಸುತ್ತದೆ.

Comments are closed.