Glowing Skin Tips: ವಯಸ್ಸು 40 ಆದ್ರೂ ಮುಖ ಗ್ಲೋ ಆಗಿರ್ಬೇಕಾ: ಹಾಗಾದ್ರೆ ಇಲ್ಲಿದೆ ನೋಡಿ ಉಪಾಯ:

Glowing Skin Tips: ವಯಸ್ಸಾಗುತ್ತ ಬಂದಂತೆ ಮುಖ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಅದರಲ್ಲೂ ಈಗಿನವರು ಹೆಚ್ಚಾಗಿ ಮೇಕಪ್ ಮಾಡುವುದರಿಂದಾಗಿ ಅತಿ ಬೇಗನೆ ಮುಖ ಸುಕ್ಕುಗಟ್ಟುತ್ತದೆ. ಆದರೆ ಇದನ್ನೆಲ್ಲ ತಡೆಯಬೇಕಾದರೆ ನಾವು ನಮ್ಮ ಜೀವನಶೈಲಿಯಲ್ಲಿ ಕೆಲವು ವಿಶೇಷ ಅಭ್ಯಾಸಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ.
ಹೌದು, ನಿದ್ರೆಯ ಕೊರತೆ ನಮ್ಮ ಮುಖದ ಮೇಲೆ ಬೀಳುತ್ತದೆ. ಸಾಕಷ್ಟು ನಿದ್ರೆ ಮಾಡುವುದರಿಂದಾಗಿ ಚರ್ಮವನ್ನು ಸರಿಪಡಿಸಬಹುದು ಹಾಗೂ ಮುಖವು ತಾಜಾವಾಗಿ ಕಾಣುವ ಜೊತೆಗೆ, ನಿದ್ದೆ ಸರಿಯಾಗಿ ಆದರೆ ಕಣ್ಣಿನ ಕೆಳಗೆ ಕಪ್ಪು ವರ್ತುಲದ ಸಮಸ್ಯೆಯು ಕಾಡುವುದಿಲ್ಲ. ಮತ್ತು ವಿಟಮಿನ್-ಸಿ ಸಮೃದ್ಧವಾಗಿರುವ ಆಹಾರವನ್ನು ನಿಮ್ಮ ಪ್ರತಿನಿತ್ಯದ ಡಯೆಟ್‌ನಲ್ಲಿ ಸೇರಿಸಿ ತಿನ್ನುವುದರಿಂದ, ಇವು ಚರ್ಮವನ್ನು ಫ್ರೀ ರಾಡಿಕಲ್‌ಗಳಿಂದ ರಕ್ಷಿಸುವ ಜೊತೆಗೆ ಯೌವನವನ್ನು ಕಾಯ್ದುಕೊಳ್ಳುವಂತೆ ಮಾಡುತ್ತದೆ.
ಹಾಗೂ ಮುಖದ ಯೋಗವನ್ನು, ವ್ಯಾಯಾಮವನ್ನು ಅಭ್ಯಾಸ ಮಾಡುವುದು ಮುಖಕ್ಕೆ ಮಸಾಜ್ ಮಾಡುವುದರಿಂದ ಮುಖದ ಸ್ನಾಯುಗಳನ್ನು ಬಿಗಿಯಾಗಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ಇದು ಚರ್ಮಕ್ಕೆ ಹೊಳಪನ್ನು ನೀಡುತ್ತದೆ ಹಾಗೂ ವಯಸ್ಸಾಗುವುದನ್ನು ನಿಧಾನಗೊಳಿಸುತ್ತದೆ. ಕೆಲವೊಮ್ಮೆ ಒತ್ತಡವು ಕೂಡ ಅತಿ ಬೇಗ ಮುಖದ ಹೊಳಪನ್ನು ಕುಂದಿಸುತ್ತದೆ. ಹೀಗಾಗಿ ಒತ್ತಡವನ್ನು ನಿವಾರಿಸಲು ಪ್ರತಿದಿನ ಸ್ವಲ್ಪ ಸಮಯ ಧ್ಯಾನ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ, ಇದು ಮುಖದ ಮೇಲೆ ಸಕಾರಾತ್ಮಕ ಶಕ್ತಿ ಮತ್ತು ನೈಸರ್ಗಿಕ ಹೊಳಪನ್ನು ಇಡುತ್ತದೆ
ಹಾಗೂ ವಯಸ್ಸಾಗುತ್ತ ಬಂದಂತೆ ಚರ್ಮ ಒಣಗಲು ಪ್ರಾರಂಭಿಸುತ್ತದೆ. ಅದಕ್ಕಾಗಿ ನಿಮ್ಮ ತ್ವಚೆಗೆ ಸರಿಯಾದ ಮಾಯಿಶ್ಚರೈಸರ್ ಹಚ್ಚಿ ಮತ್ತು ಪ್ರತಿದಿನ ಸನ್‌ಸ್ಕ್ರೀನ್ ಹಚ್ಚುವುದರಿಂದ ಚರ್ಮವು ಹೈಡ್ರೇಟೆಡ್ ಆಗಿರುತ್ತದೆ ಮತ್ತು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತವೆ.
Comments are closed.