IPL 2025: RCB ವಿರುದ್ಧ ಪಂಜಾಬ್ ಗೆದ್ದರೆ ಪ್ರೀತಿ ಜಿಂಟಾ ಪಡೆಯೋ ಲಾಭ ಎಷ್ಟು ಗೊತ್ತಾ?

IPL 2025: ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಿನಿಮಾಗಳಲ್ಲಿ ಮಿಂಚುತ್ತಿರುವುದಕ್ಕಿಂತ ಉದ್ಯಮದಲ್ಲಿ ತೊಡಗಿರುವುದೇ ಹೆಚ್ಚು, ಒಂದು ಲಾಭವನ್ನು ಮತ್ತೊಂದಕ್ಕೆ ಹಾಕಿ ಲಾಭ ಗಳಿಸುತ್ತಿದ್ದಾರೆ. ಅದರಲ್ಲೂ ಐಪಿಎಲ್ ತಂಡ ಪಂಜಾಬ್ ಕಿಂಗ್ಸ್ ಮೇಲೆ ಹೆಚ್ಚು ಹಣವನ್ನು ಹೂಡಿಕೆ ಮಾಡಿರೋದು ವಿಶೇಷ.
ಸುಮಾರು 11 ವರ್ಷಗಳ ಬಳಿಕ ಫೈನಲ್‌ಗೆ ಪ್ರವೇಶ ಪಡೆದಿರುವ ಪಂಜಾಬ್ ತಂಡ ಈ ಬಾರಿ ಏನಾದರೂ ಪ್ರೀತಿ ಜಿಂಟಾ ಗೆ ಬಾರಿ ಪ್ರಮಾಣದಲ್ಲಿ ಲಾಭವಾಗಲಿದೆ. ಪ್ರೀತಿ ಜಿಂಟಾ ಈ ಹಿಂದೆ 2008ರಲ್ಲಿ ನೆಸ್ ವಾಡಿಯಾ, ಕರಣ್ ಪೌಲ್, ಮೋಹಿತ್ ಬರ್ಮನ್ ಜೊತೆ ಸೇರಿ ಪ್ರೀತಿ ಜಿಂಟಾ ಪಂಜಾಬ್ ತಂಡವನ್ನು ಖರೀದಿಸಿದ್ದು,ವರದಿಗಳ ಪ್ರಕಾರ ಅಂದು ಪ್ರೀತಿ ಜಿಂಟಾ 35 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಆಗ ಮನಿ ಕಂಟ್ರೋಲ್ ವರದಿ ಪ್ರಕಾರ, 2023ರಲ್ಲಿ ಪ್ರೀಜಿ ಜಿಂಟಾ ಸಹ ಮಾಲೀಕತ್ವದ ಪಂಜಾಬ್ ಕಿಂಗ್ಸ್ ತಂಡ ಸುಮಾರು 664 ಕೋಟಿ ರೂಪಾಯಿ ಹಣವನ್ನು ಜನರೇಟ್ ಮಾಡಿತ್ತು.
ಒಂದು ವೇಳೆ 2025ರ ಟ್ರೋಫಿಯನ್ನು ಪಂಜಾಬ್ ಕಿಂಗ್ಸ್ ಗೆದ್ದರೆ, ತಂಡಕ್ಕೆ 21 ಕೋಟಿ ರೂಪಾಯಿ ಹಣ ಸಿಗಲಿದೆ. ಇವರ ಶೇರುಗಳ ಆಧಾರದ ಮೇಲೆ ನಟಿ ಪ್ರೀತಿ ಜಿಂಟಾಗೆ ಲಾಭದಲ್ಲಿ
ಶೇ.23ರಷ್ಟು ಅನುಪಾತದ ಆಧಾರದ ಮೇಲೆ ಲಾಭ ಸಿಗಲಿದೆ.
ಇನ್ನೂ ಐಪಿಎಲ್ ರೂಲ್ಸ್ ಪ್ರಕಾರ ಐಪಿಎಲ್ ಗೆದ್ದ ತಂಡದ ಆಟಗಾರರಿಗೆ ಶೇ. 50 ರಷ್ಟು ಹಣವನ್ನು ನೀಡಬೇಕು. ಹೀಗಾಗಿ 2.42 ಕೋಟಿ ರೂಪಾಯಿ ಪ್ರೀತಿ ಜಿಂಟಾಗೆ ಜೇಬು ಸೇರಲಿದೆ ಎನ್ನಲಾಗುತ್ತಿದೆ. ಜೊತೆಗೆ ಪ್ರೀತಿ ಜಿಂಟಾ ತಂಡ ಪಂಜಾಬ್ ಕಿಂಗ್ಸ್ ಪ್ರಾಯೋಜಕರು, ಜಾಹೀರಾತು ಸೇರಿದಂತೆ ಹಲವು ಕಡೆಗಳಿಂದ ಕೋಟಿಗಳ ಲೆಕ್ಕದಲ್ಲಿ ಹಣ ಹರಿದು ಬರುತ್ತೆ. ಹೀಗಾಗಿ ಪಂದ್ಯ ಗೆಲ್ಲುವುದರಿಂದ ಸಿಗುವ ಹಣಕ್ಕಿಂದ ಪ್ರಾಯೋಕತ್ವದಿಂದ ಬರುವ ಲಾಭ ಹೆಚ್ಚಿದೆ ಎನ್ನಬಹುದಾಗಿದೆ.
Comments are closed.