D K Shivkumar : ಹೊಟ್ಟೆ ಬಟ್ಟೆಗೆ ನಮ್ಮ ಬಳಿ ಬರ್ತಾರೆ, ವೋಟ್ ಬೇರೆಯವರಿಗೆ ಹಾಕ್ತಾರೆ ಎಂದ ಡಿಕೆಶಿ – ಯಾವಾಗ ನಿಮ್ಮ ಬಳಿ ಬಂದಿದ್ವಿ ಎಂದು ರೊಚ್ಚಿಗೆದ್ದ ದಕ್ಷಿಣ ಕನ್ನಡದ ಜನ

D K Shivkumar : ಮಂಗಳೂರಿನ ಜನ ಹೊಟ್ಟೆ ಬಟ್ಟೆಗೆ ನಮ್ಮ ಬಳಿ ಬರುತ್ತಾರೆ ಆದರೆ ವೋಟ್ ಮಾತ್ರ ಬೇರೆಯವರಿಗೆ ಹಾಕುತ್ತಾರೆ ಎಂದು ಕರಾವಳಿ ಜನರ ಕುರಿತು ಡಿಕೆ ಶಿವಕುಮಾರ್ ಅವರು ಹಗುರವಾಗಿ ಮಾತನಾಡಿದ್ದರು. ಇದೀಗ ಅವರ ಮಾತಿಗೆ ಮಂಗಳೂರಿನ ಜನ ಕಿಡಿ ಕಾರಿದ್ದಾರೆ. ನಾವು ಯಾವಾಗ ನಿಮ್ಮ ಬಳಿ ಬಂದಿದ್ವಿ, ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನವರು ಗ್ಯಾರಂಟಿ ಬೇಡ ಎಂದ್ರು. ಆದರೆ ನಂತರ ಅವರೇ ಮೊದಲು ಕ್ಯೂನಲ್ಲಿ ನಿಂತಿರುತ್ತಾರೆ. ಕನಕಪುರದವರಿಗಿಂತ ಅವರೇ ಶೇ.80 ರಷ್ಟು ಅರ್ಜಿ ಹಾಕುತ್ತಾರೆ. ಮಂಗಳೂರಿಗರಿಗೆ ಹೊಟ್ಟೆಬಟ್ಟೆಗೆ ಕಾಂಗ್ರೆಸ್ ನವರು ಬೇಕು. ವೋಟ್ ಹಾಕೋಕೆ ಬೇರೆಯವರು ಬೇಕು ಎಂದು ಹಗುರವಾಗಿ ಮಾತನಾಡಿದ್ದರು.
ಹೌದು, ಡಿಕೆ ಶಿವಕುಮಾರ್ ಅವರ ಹೇಳಿಕೆ ಮಂಗಳೂರಿಗರನ್ನು ರೊಚ್ಚಿಗೆಬ್ಬಿಸಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ. ಡಿಕೆಶಿಯವರೇ ನಾವು ಮಂಗಳೂರಿನವರು ಸ್ವಾಭಿಮಾನಿಗಳು. ಹೊಟ್ಟೆ ಬಟ್ಟೆಗೆ ನಿಮ್ಮ ಮುಂದೆ ಕೈ ಕಟ್ಟಿ ನಿಲ್ಲುವ ಪರಿಸ್ಥಿತಿ ನಮಗಿಲ್ಲ. ನಾವು ಯಾವಾಗ ಬಂದಿದ್ದೇವೆ ಹೇಳಿ ಎಂದಿದ್ದಾರೆ.
ಮಂಗಳೂರು ಶಾಸಕ ಭರತ್ ಶೆಟ್ಟಿ ಡಿಕೆ ಶಿವಕುಮಾರ್ ವಿರುದ್ಧ ಕಿಡಿ ಕಾರಿಂದು ಕಿಡಿ ಕಾರಿದ್ದು, ರಾಜ್ಯದ ಆದಾಯಕ್ಕೆ ಮಂಗಳೂರಿನ ಕೊಡುಗೆ ಹೆಚ್ಚಿದೆ. ಇದನ್ನೇ ಬೇರೆ ಜಿಲ್ಲೆಗಳ ಅಭಿವೃದ್ಧಿಗೂ ಬಳಸುತ್ತೀರಿ. ಅಷ್ಟಕ್ಕೂ ನೀವು ನಿಮ್ಮ ಸ್ವಂತ ಜೇಬಿನಿಂದ ಕೊಡುತ್ತಿಲ್ಲ. ರಾಜ್ಯದ ಆದಾಯದಲ್ಲಿ ನಮಗೂ ಪಾಲಿದೆ. ಮಾತನಾಡುವಾಗ ನೋಡಿಕೊಂಡು ಮಾತನಾಡಿ ಎಂದು ಎಚ್ಚರಿಕೆ ನೀಡಿದ್ದಾರೆ.
Comments are closed.