Covid Guidelines: ಕರ್ನಾಟಕದಲ್ಲಿ ಕೊರೊನಾ ಆಕ್ಟೀವ್: ಆರೋಗ್ಯ ಇಲಾಖೆಯಿಂದ ಶಾಲೆಗಳಿಗೆ ಮಾರ್ಗಸೂಚಿ ಪ್ರಕಟ

Covid Guidelines for Schools: ಕರ್ನಾಟಕದಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೊನ್ನೆ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಯಾವ ಮಕ್ಕಳಿಗೆ ನೆಗಡಿ, ಜ್ವರ, ಕೆಮ್ಮು ಇದ್ದರೆ ಕಡ್ಡಾಯ ರಜೆ ನೀಡಲು ಸೂಚನೆ ನೀಡಿದ್ದಾರೆ. ಈ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಸರಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಹೊಸ ಮಾರ್ಗಸೂಚಿ ಪ್ರಕಟ ಮಾಡಿದೆ.
ಇದರ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಇದೀಗ ಸರಕಾರ ಹಾಗೂ ಖಾಸಗಿ ಶಾಲೆಗಳಿಗೆ ಹೊಸ ಮಾರ್ಗಸೂಚಿ ಪ್ರಕಟ ಮಾಡಿದೆ.
ಆರೋಗ್ಯ ಇಲಾಖೆಯ ಗೈಡ್‌ಲೈನ್ಸ್:
ಮಕ್ಕಳಲ್ಲಿ ಜ್ವರ , ಕೆಮ್ಮು, ನೆಗಡಿ ಗುಣಲಕ್ಷಣಗಳು ಬಂದರೆ ಶಾಲೆಗೆ ಕಳುಹಿಸಬಾರದು.
ಸಂಪೂರ್ಣವಾಗಿ ಗುಣಮುಖರಾದ ಮೇಲೆ ಶಾಲೆಗಳಿಗೆ ಕಳುಹಿಸಬೇಕು.
ಗುಣಲಕ್ಷಣಗಳಿರುವ ಮಕ್ಕಳು ಶಾಲೆಗೆ ಬಂದರೆ ಪೋಷಕರಿಗೆ ತಿಳಿಸಿ ಮನೆಗೆ ಕಳುಹಿಸಬೇಕು.
ಶಾಲಾ ಸಿಬ್ಬಂದಿಯಲ್ಲಿ ಗುಣಲಕ್ಷಣ ಕಂಡು ಬಂದಲ್ಲಿ ಮುಂಜಾಗೃತ ಕ್ರಮ ಪಾಲಿಸಬೇಕು.
ಶಾಲೆಗಳಲ್ಲಿ ಸ್ವಚ್ಛತೆ, ಹಾಗೂ ಕೋವಿಡ್ ನಿಯಮ ಪಾಲಿಸಬೇಕು.
Comments are closed.