Gold Rules : ವಿವಾಹಿತ ಮಹಿಳೆ ಮನೆಯಲ್ಲಿ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು? ಭಾರತೀಯ ಕಾನೂನು ಏನು ಹೇಳುತ್ತೆ?

Share the Article

Gold Rules: ಚಿನ್ನ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪುರುಷರಲ್ಲಿ ಕೆಲವರಿಗೆ ಚಿನ್ನ ಇಷ್ಟವಾದರೆ, ಮಹಿಳೆಯರಲ್ಲಿ ಎಲ್ಲರಿಗೂ ಕೂಡ ಚಿನ್ನದ ಮೇಲೆ ಬಲು ಪ್ರೀತಿ. ಎಷ್ಟಿದ್ದರೂ ಕೂಡ ಸಾಲದು ಎಂಬ ಆಸೆ. ಅದರಲ್ಲೂ ವಿವಾಹಿತ ಮಹಿಳೆಯರಿಗಂತು ಚಿನ್ನದ ಮೇಲೆ ಎಲ್ಲಿಲ್ಲದ ಆಸೆ, ಪ್ರೀತಿ, ಅಪೇಕ್ಷೆ. ಇಂದು ಪ್ರತಿಯೊಬ್ಬ ಭಾರತೀಯರ ಮನೆಯಲ್ಲೂ ಚಿನ್ನ ಇದ್ದೇ ಇದೆ. ಪ್ರತಿಯೊಬ್ಬ ಹೆಣ್ಣು ಮಗಳ ಬಳಿಯೂ 3, 4 ಗ್ರಾಂ ಗಿಂತ ಹೆಚ್ಚು ಬಂಗಾರದ ಆಭರಣ ಇದ್ದೇ ಇರುತ್ತದೆ.

ಇನ್ನು ಸುರಕ್ಷತೆಗಾಗಿ, ಚಿನ್ನದ ಆಭರಣಗಳನ್ನು ಸಾಮಾನ್ಯವಾಗಿ ಬ್ಯಾಂಕ್ ಲಾಕರ್‌ಗಳಲ್ಲಿ ಇಡಲಾಗುತ್ತದೆ, ನಿರ್ದಿಷ್ಟ ಮೊತ್ತವನ್ನು ಮನೆಯಲ್ಲಿ ಇಡಲಾಗುತ್ತದೆ. ಮಿತಿಯೊಳಗೆ ಇರುವುದು ಯಾವುದೇ ಸಮಸ್ಯೆಯಲ್ಲ, ಆದರೆ ಅವುಗಳನ್ನು ಮೀರಿದರೆ ಕಾನೂನು ತೊಂದರೆಗೆ ಕಾರಣವಾಗಬಹುದು. ಹಾಗಾದರೆ ವಿವಾಹಿತ ಮಹಿಳೆಯು ಮನೆಯಲ್ಲಿ ಎಷ್ಟು ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಬಹುದು? ಭಾರತೀಯ ಕಾನೂನು ಏನು ಹೇಳುತ್ತದೆ? ಇಲ್ಲಿದೆ ನೋಡಿ ಡೀಟೇಲ್ಸ್.

ಅಂದಹಾಗೆ ವಿವಾಹಿತ ಮಹಿಳೆಯರು ಮನೆಯಲ್ಲಿ 500 ಗ್ರಾಂ ಚಿನ್ನ ಮತ್ತು ಚಿನ್ನದ ಆಭರಣಗಳನ್ನು ಇಟ್ಟುಕೊಳ್ಳಬಹುದು. ಅವಿವಾಹಿತ ಮಹಿಳೆಯರು 250 ಗ್ರಾಂ ಚಿನ್ನ ಮತ್ತು ಚಿನ್ನದ ಆಭರಣಗಳನ್ನು ಇಟ್ಟುಕೊಳ್ಳಬಹುದು. ಪುರುಷರು ಮನೆಯಲ್ಲಿ 100 ಗ್ರಾಂ ಚಿನ್ನವನ್ನು ಮಾತ್ರ ಇಟ್ಟುಕೊಳ್ಳಬಹುದು.

ಈ ಮಿತಿ ಒಬ್ಬ ವ್ಯಕ್ತಿಗೆ ಅನ್ವಯಿಸುತ್ತದೆ. ಒಂದು ಮನೆಯಲ್ಲಿ ಇಬ್ಬರು ವಿವಾಹಿತ ಮಹಿಳೆಯರು ಇದ್ದರೆ, ಅವರು ಒಂದು ಕಿಲೋಗ್ರಾಂ ಚಿನ್ನವನ್ನು ಇಟ್ಟುಕೊಳ್ಳಬಹುದು. ವಿವಾಹಿತ ದಂಪತಿಗಳು 750 ಗ್ರಾಂ ವರೆಗೆ ಇಟ್ಟುಕೊಳ್ಳಬಹುದು. ನಿಗದಿತ ಮಿತಿಯನ್ನು ಮೀರಿ ನೀವು ಚಿನ್ನವನ್ನು ಹೊಂದಿದ್ದರೆ, ನೀವು ಆದಾಯ ತೆರಿಗೆ ಅಧಿಕಾರಿಗಳಿಗೆ ಪುರಾವೆಯನ್ನು ಒದಗಿಸಬೇಕು.

Comments are closed.