Mangaluru: ಮಂಗಳೂರು”ಪಿಲಿ ಪಂಜ” ಸಿನಿಮಾದ ಟೀಸರ್ ಬಿಡುಗಡೆ”: ನವಂಬರ್ 7 ರಂದು ಸಿನಿಮಾ ತೆರೆಗೆ!

Mangaluru: ಯಸ್ ಬಿ ಗ್ರೂಪ್ಸ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್ ನಡಿ ತಯಾರಾದ ಬಹು ನಿರೀಕ್ಷಿತ “ಪಿಲಿಪಂಜ” ತುಳು ಸಿನಿಮಾದ ಟೀಸರ್ ನ್ನು ನಿರ್ದೇಶಕ ದೇವದಾಸ ಕಾಪಿಕಾಡ್ ಬಿಡುಗಡೆಗೊಳಿಸಿದರು. ಟೀಸರ್ ನ್ನು ವೀಕ್ಷಿಸಿದ ದೇವದಾಸ್ ಕಾಪಿಕಾಡ್ ಅವರು ತುಳುವಿನಲ್ಲಿ ಮತ್ತೊಂದು ಸದಭಿರುಚಿಯ ಸಿನಿಮಾವನ್ನು ಪಿಲಿಪಂಜದ ಮೂಲಕ ನೋಡಲು ಸಾಧ್ಯವಿದೆ ಎಂದರು. ಸಿನಿಮಾ ತಂಡಕ್ಕೆ ಶುಭ ಹಾರೈಸಿದರು.

ತುಳು ಸಿನಿಮಾರಂಗದಲ್ಲಿ ವಿಭಿನ್ನ ತಂತ್ರಜ್ಞಾನದಿಂದ ತಯಾರಾದ “ಪಿಲಿಪಂಜ” ಸಿನಿಮಾ ನವೆಂಬರ್ 7ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ, ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿ ಭಾರೀ ಸದ್ದು ಮಾಡಿದೆ, ಟೀಸರ್ ನಮ್ಮನ್ನು ಇನ್ನಷ್ಟು ಕುತೂಹಲ ಮೂಡಿಸವಂತೆ ಮಾಡಿದೆ, ಸಿನಿಮಾ ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ.
Comments are closed.