Rain: ಕಾರಿಗೆ ಮಳೆ ನೀರು ಹಾರಿದ್ದಕ್ಕೆ ಬೆರಳು ಕಚ್ಚಿ ಮಾಂಸ ಹೊರಬರುವಂತೆ ವಿಕೃತಿ ಮೆರೆದ ವ್ಯಕ್ತಿ

Share the Article

Rain: ಮಳೆಯಿಂದಾಗಿ ವಾಹನಗಳ ಸಂಚಾರದಿಂದ ಇತರೆ ಸವಾರರ ಮೇಲೆ ನೀರು ಹಾರುವುದು ಸಾಮಾನ್ಯವಾಗಿರುತ್ತದೆ. ಇಲ್ಲೊಬ್ಬ ವ್ಯಕ್ತಿ ಕಾರಿಗೆ ಮಳೆ ನೀರು ಹಾರಿದ್ದಕ್ಕೆ ಚಾಲಕನ ಬೆರಳು ಕಚ್ಚಿ ವಿಕೃತಿ ಮೆರೆದಿರುವ ಘಟನೆ ಮೇ 25 ರ ರಾತ್ರಿ ಲುಲುಮಾಲ್‌ ಅಂಡರ್‌ಪಾಸ್‌ ಬಳಿ ನಡೆದಿದೆ.

ಜಯಂತ್‌ ದಂಪತಿಗಳು ಮೆಜೆಸ್ಟಿಕ್‌ನಿಂದ ಲುಲು ಮಾಲ್‌ ಕಡೆ ತೆರಳುತ್ತಿದ್ದಾಗ, ಓಕುಳಿಪುರಂ ಅಂಡರ್‌ಪಾಸ್‌ನಲ್ಲಿ ನಿಂತಿದ್ದ ನೀರು ಪಕ್ಕದ ಕಾರಿಗೆ ಹಾರಿದೆ. ಕೂಡಲೇ ಕಾರು ಚಾಲಕ ಕಾರು ನಿಲ್ಲಿಸಿ ಅವಾಚ್ಯ ಪದಗಳಿಂದ ಜಯಂತ್‌ರನ್ನು ನಿಂದನೆ ಮಾಡಿದ್ದಾನೆ. ಈ ಕುರಿತು ವ್ಯಕ್ತಿ ಕ್ಷಮೆ ಕೇಳಿದ್ದರೂ ಬಿಡಲಿಲ್ಲ.

ಜಯಂತ್‌ರನ್ನು ಎಳೆದಾಡಿ ಮುಖಕ್ಕೆ ಗುದ್ದಿ ಹಲ್ಲೆ ಮಾಡಿದ್ದಾನೆ. ಇಷ್ಟು ಮಾತ್ರವಲ್ಲದೇ ಬಲಗೈನ ಉಂಗುರದ ಬೆರಳನ್ನು ಕಚ್ಚಿ ಮಾಂಸ ಹೊರ ಬರುವ ಹಾಗೆ ಗಾಯ ಮಾಡಿದ್ದಾನೆ. ಬಲಗೈ ಬೆರಳಿನ ಮಾಂಸ ಹೊರಬಂದಿದ್ದರಿಂದ ಜಯಂತ್‌ ಸರ್ಜರಿಗೊಳಗಾಗಿದ್ದು, ವೈದ್ಯರು ಐದು ಸ್ಟಿಚ್‌ ಹಾಕಿದ್ದಾರೆ. 6 ತಿಂಗಳು ವಿಶ್ರಾಂತಿ ಮಾಡಲು ಸಲಹೆ ನೀಡಿದ್ದಾರೆ. ಆಸ್ಪತ್ರೆ ಬಿಲ್‌ 2 ಲಕ್ಷ ಕಟ್ಟಿದ್ದಾರೆ.

ಮಾಗಡಿ ರೋಡ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರಿನಲ್ಲಿದ್ದ ಚಾಲಕ ಮತ್ತು ಮಹಿಳೆ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Comments are closed.