Actress Sonal: ನಟಿ ಸೋನಲ್ ಲಂಗ ದಾವಣಿ ಹಾಕಿದ್ರೆ ದರ್ಶನ್ ಸರ್ ಏನಂತಾರೆ?: ನಟಿ ಸೋನಲ್ ಹೇಳಿಕೆ ವೈರಲ್

Bengaluru: ಸ್ಯಾಂಡಲ್‌ವುಡ್ ನಟಿ ಸೋನಲ್ ಮೊಂಥೆರೋ ಹಾಗೂ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಅವರು ಕೆಲ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದು, ಮದುವೆಯ ನಂತರ ಅವರು ನಟಿಸಿರುವ ಮೊದಲ ಸಿನಿಮಾ ಮಾದೇವ ಇನ್ನೇನು ಕೆಲವೇ ದಿನಗಳಲ್ಲಿ ತೆರೆ ಮೇಲೆ ಬರಲು ರೆಡಿಯಾಗಿದ್ದು, ಈ ಸಿನಿಮಾ ಪ್ರಚಾರದ ವೇಳೆ ಸೋನಲ್ ಅವರು ತಮ್ಮ ಮದುವೆ ಜೀವನದ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ್ದಾರೆ.
ಸಿನಿಮಾ ಬಗ್ಗೆ ಮಾತನಾಡಿರುವ ಸೋನಲ್, ಮದುವೆಯಾದ ನಂತರ ನನ್ನ ಮೊದಲ ಸಿನಿಮಾ ರಿಲೀಸ್ ಆಗ್ತಿದ್ದು,ಮೊದಲ ಸಿನಿಮಾ ಆದ ಕಾರಣ ಅಷ್ಟೇ ಖುಷಿ ಭಯ ಎರಡೂ ಇದೆ. ತುಂಬಾ ಒಳ್ಳೆಯ ಸಿನಿಮಾ ಇದು ಹಾಗೂ ಈ ಸಿನಿಮಾದಲ್ಲಿ ಕಂಪ್ಲೀಟ್ ಆಗಿ ಲಂಗ ದಾವಣಿಯಲ್ಲೇ ಕಾಣಿಸಿಕೊಳ್ಳುತ್ತೇನೆ ಎಂದಿದ್ದಾರೆ.
ʼಮಾದೇವ ಶೂಟಿಂಗ್ ಟೈಮಲ್ಲಿ ದರ್ಶನ್ ಸರ್ ಜೊತೆ ಮಾತನಾಡಿದೆ. ಆಗ ಅವರು ಶೂಟಿಂಗ್ ಹೇಗೆ ಆಗ್ತಿದೆ? ಏನು ನಿನ್ನ ಪಾತ್ರ ಎಂದು ಕೇಳಿದ್ರು. ಅವರಿಗೆ ಜನರಲ್ಲಾಗಿ ನಾನು ಸೀರೆ, ಲಂಗ ದಾವಣಿ ಹಾಕಿದ್ರೆ, ಅಯ್ಯೋ ಥು ನೋಡೋಕಾಗಲ್ಲ ನಿಂಗೆ ಅಂತಾರೆ. ತಾನು ದರ್ಶನ್ ಸರ್‌ನ ಭೇಟಿಯಾಗೋಕೆ ಟ್ರೈ ಮಾಡಿದ್ದು, ಇವಾಗ ಅವರು ಶೂಟಿಂಗ್‌ನಲ್ಲಿ ಬ್ಯುಸಿ ಇರುವುದರಿಂದ ಭೇಟಿಯಾಗಲು ಆಗಲಿಲ್ಲ ಹಾಗೂ ಖಂಡಿತವಾಗಿಯೂ ಅವರನ್ನು ಮೀಟ್ ಮಾಡ್ತೀನಿ ಎಂದು ಸೋನಲ್ ಹೇಳಿದ್ದಾರೆ.
ತರುಣ್ ಅವರು ಡೈರೆಕ್ಟ್ ಮಾಡ್ತಾರೆ ನಿಜ ಆದ್ರೆ ಮನೆಯಲ್ಲಿ ಅವರನ್ನ ನಾನೇ ಡೈರೆಕ್ಟ್ ಮಾಡೋದು ಎಂದು ಸೋನಲ್ ಹೇಳಿದ್ದು, ನನಗೆ ಮದುವೆ ಆದ ಮೇಲೆ ಏನೆಲ್ಲ ಚೇಂಜ್ ಆಗುತ್ತೆ ಅನ್ನೋದು ಮೊದಲು ಇತ್ತು. ಆದ್ರೆ ಅದೆಲ್ಲ ಮೈಂಡ್‌ಸೆಟ್‌ನಲ್ಲಿರೋದು ಅಷ್ಟೇ. ಇಲ್ಲಿ ಮದುವೆಗೆ ಮುಂಚೆ ಹಾಗೂ ಮದುವೆ ಆದ ಮೇಲೆ ಅನ್ನೋದೆಲ್ಲ ಇಲ್ಲ. ನನಗಂತೂ ಮದುವೆ ಆಗಿದೆ ಅನ್ನೋ ವ್ಯತ್ಯಾಸವೇ ಕಾಣ್ತಿಲ್ಲ. ನನ್ನ ಗಂಡ ತರುಣ್ ಅವರು ಕೂಡ ಸಿನಿಮಾರಂಗದಲ್ಲೇ ಇರುವುದರಿಂದ ಅವರು ಕೂಡ ನನಗೆ ತುಂಬಾ ಸಪೋರ್ಟ್ ಮಾಡ್ತಾರೆ ಎಂದು ಹೇಳಿದ್ದಾರೆ.
Comments are closed.