Supreme Court : ಹೆರಿಗೆ ರಜೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ!!

Supreme Court: ಹೆರಿಗೆ ರಜೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಒಂದನ್ನು ಹೊರಡಿಸಿದ್ದು, ಮಹಿಳೆಯರಿಂದ ಈ ಹಕ್ಕನ್ನು ಯಾರು ಕಸಿದುಕೊಳ್ಳುವಂತಿಲ್ಲ ಎಂದು ಆದೇಶಿಸಿದೆ.

ಹೌದು, ಹೆರಿಗೆ ರಜೆ ವಿಚಾರವಾಗಿ ತಮಿಳುನಾಡಿನ ಶಿಕ್ಷಕಿಯೊಬ್ಬರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಶಿಕ್ಷಕಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಉಜ್ವಲ್ ಭೂಯಾನ್ ಅವರಿದ್ದ ಪೀಠವು ವಿಚಾರಣೆ ನಡೆಸಿದೆ. ಈ ವೇಳೆ ಮಾತೃತ್ವ ರಜೆಯು ಮಹಿಳೆಯ ಸಂತಾನೋತ್ಪತ್ತಿ ಹಕ್ಕು ಆಗಿದೆ. ಅಲ್ಲದೆ ಹೆರಿಗೆ ರಜೆಯು ಹೆರಿಗೆ ಸೌಲಭ್ಯಗಳ ಅವಿಭಾಜ್ಯ ಅಂಗ ಆಗಿದೆ. ಈ ರಜೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.
ಅಂದಹಾಗೆ ಶಿಕ್ಷಕಿಯು ಮೊದಲ ಮದುವೆ ಆಗಿದ್ದಾಗ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದರು. ಬಳಿಕ ಎರಡನೇ ವಿವಾಹ ಆದ ಮೇಲೆ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ. ಅವರಿಗೆ ರಜೆ ನೀಡಲು ಸಾಧ್ಯವಿಲ್ಲ ಎಂದಿದ್ದ ಶಿಕ್ಷಣ ಇಲಾಖೆ, ಹೆರಿಗೆ ರಜೆ ನೀಡಲು ನಿರಾಕರಿಸಿತ್ತು. ಹೀಗಾಗಿ ಅವರು ಸುಪ್ರೀಂ ಕೋರ್ಟ್ ನಲ್ಲಿ ಈ ವಿಚಾರವಾಗಿ ಅರ್ಜಿ ಸಲ್ಲಿಸಿ, ತಮ್ಮ ರಜೆಯನ್ನು ಪಡೆದುಕೊಂಡಿದ್ದಾರೆ.
Comments are closed.