ಅಬ್ದುಲ್ ಕಲಾಂ ಬಯೋ ಪಿಕ್: ಈ ಚಿತ್ರಕ್ಕೆ ಧನುಷ್ ಹೀರೊ

Share the Article

Hyderabad: ಇದೀಗ ತೆರೆ ಮೇಲೆ ಕಾಣಿಸಿಕೊಳ್ಳೋಕೆ ತಯಾರಾಗ್ತಿದೆ ಅಬ್ದುಲ್ ಕಲಾಂ ಬಯೋ ಪಿಕ್. ಹೌದು! ತಮಿಳಿನ ಖ್ಯಾತ ನಟ, ನಿರ್ಮಾಕ, ಗಾಯಕ ಆಗುವಂತಹ ಧನುಷ್ ಈ ಚಿತ್ರದಲ್ಲಿ ಕಲಾಂ ಪಾತ್ರದಲ್ಲಿ ಮಿಂಚಲಿದ್ದಾರೆ.

ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಿರ್ದೇಶಕ ಓಂ ರಾವತ್ ಈ ಕುರಿತಾಗಿ ತಿಳಿಸಿದ್ದು, ಫಸ್ಟ್ ಲುಕ್ ಪೋಸ್ಟರ್ ಅನ್ನು ಕೂಡ ಅನಾವರಣಗೊಳಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ‘ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ’ ಎಂದು ನಾಮಕರಣ ಮಾಡಿದ್ದು, ಆದಿ ಪುರುಷ್ ಚಿತ್ರದ ನಿರ್ದೇಶಕ ಓಂ ರಾವತ್ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ.

ಈ ಸಿನಿಮಾವನ್ನು ಅಭಿಷೇಕ್ ಅಗರ್ವಾಲ್ (ದಿ ಕಾಶ್ಮೀರಿ ಫೈಲ್ಸ್ ನ ನಿರ್ಮಾಪಕ), ಭೂಷಣ್ ಕುಮಾರ್, ಕೃಷನ್ ಕುಮಾರ್ ಹಾಗೂ ಅನಿಲ್ ಸುಂಕರ ನಿರ್ಮಾಣ ಮಾಡುತ್ತಿದ್ದು, ಸೈವಿನ್ ಕ್ವಾಡ್ರಾಸ್ ಅವರು ಈ ಚಿತ್ರಕ್ಕೆ ಚಿತ್ರಕಥೆ ಬರೆಯುತ್ತಿದ್ದಾರೆ. ಹಾಗೂ ಧನುಷ್ ಅವರು ತಾನು ತೆರೆ ಮೇಲೆ ಕಲಾಂ ಆಗಿ ಕಾಣಿಸಿಕೊಳ್ಳಲು ಅತ್ಯಂತ ಧನ್ಯನಾಗಿದ್ದೇನೆ ಎಂದು ತಿಳಿಸಿದ್ದಾರೆ.

Comments are closed.