Sports news: ಟೇಕ್ವಾಂಡೋ ಸ್ಪರ್ಧೆಯಲ್ಲಿ ಕನ್ನಡಿಗನಿಗೆ 2 ಚಿನ್ನದ ಪದಕ!

Sports news: ಮಲೇಷ್ಯಾದ ಪ್ಯಾನಸೋನಿಕ್‌ನಲ್ಲಿ ಅಂತಾರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆಯಲ್ಲಿ ಭಾರತ ತಂಡ ಪ್ರತಿನಿಧಿಸಿದ್ದ ಬೆಂಗಳೂರಿನ ದಕ್ಷಿಣ ಸೂರ್ಯ, 2 ಚಿನ್ನ, 1 ಬೆಳ್ಳಿ, 1 ಕಂಚು ಪದಕವನ್ನು ಗಳಿಸಿದ್ದಾರೆ.

15ರಿಂದ 17 ವರ್ಷದೊಳಗಿನ ವಯೋಮಿತಿಯಲ್ಲಿ 62 ಕೆಜಿ ವಿಭಾಗದಲ್ಲಿ ದಕ್ಷಿಣ್ ಸ್ಪರ್ಧಿಸಿದ್ದ 4 ವಿಭಾಗಗಳಲ್ಲೂ ಪದಕಗಳ ಬೇಟೆಯಾಡಿರೋದು ವಿಶೇಷವಾಗಿದೆ. ಸ್ಪಾರಿಂಗ್ ವಿಭಾಗದಲ್ಲಿ 1 ಚಿನ್ನ, ಪ್ಯಾಟರ್ನ್ ವಿಭಾಗದಲ್ಲಿ 1 ಚಿನ್ನ, ವಾರಿಯರ್ ಸ್ಟಾರಿಂಗ್ ವಿಭಾಗದಲ್ಲಿ 1 ಬೆಳ್ಳಿ ಹಾಗೂ ವಾರಿಯರ್ ಪ್ಯಾಟರ್ನ್ ವಿಭಾಗದಲ್ಲಿ 1 ಕಂಚಿನ ಪದಕವನ್ನು ಗಳಿಸಿದ್ದಾರೆ.
Comments are closed.