Donald Trump: ಆಪರೇಷನ್ ಸಿಂಧೂರ್ ‘ಶೇಮ್ ಲೆಸ್’ ಎಂದ ಟ್ರಂಪ್ !!


Donald Trum: ಪಾಕಿಸ್ತಾನದಿಂದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರ ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿ 200 ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಇದು ವಿಶ್ವದಾದ್ಯಂತ ಸುದ್ದಿಯಾಗುತ್ತಿರುವ ಹೊತ್ತಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಪರೇಷನ್ ಸಿಂಧೂರ್ ಅನ್ನು ‘ಶೇಮ್ ಲೆಸ್’ ಕರೆದಿದ್ದಾರೆ.
ಹೌದು, ಆಪರೇಷನ್ ಸಿಂಧೂರ ಕುರಿತು ವಿಶ್ವದ ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈಗ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ಇದೊಂದು ನಾಚಿಕೆಗೇಡಿನ ವಿಚಾರ ಎಂದು ಹೇಳುವ ಮೂಲಕ ತಮ್ಮ ದ್ವಿಮುಖ ನೀತಿಯನ್ನು ಪ್ರದರ್ಶಿಸಿದ್ದಾರೆ. ಶ್ವೇತ ಭವನದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು ಇದು ನಾಚಿಕೆಗೇಡಿನ ಸಂಗತಿ, ನಾವು ಈಗಷ್ಟೇ ಅದರ ಬಗ್ಗೆ ಕೇಳಿದ್ದೇವೆ ಹಿಂದಿನ ಕೆಲವು ಘಟನೆಗಳನ್ನು ಆಧರಿಸಿ, ಏನಾದರೂ ಸಂಭವಿಸಲಿದೆ ಎಂದು ಜನರಿಗೆ ತಿಳಿದಿತ್ತು ಎಂದು ತಿಳಿಸಿದರು. ಈ ಮೂಲಕ ಭಾರತಕ್ಕೆ, ಪ್ರಧಾನಿ ಮೋದಿಗೆ ಫ್ರೆಂಡ್, ಒಳ್ಳೆಯ ಫ್ರೆಂಡ್ ಎಂದು ಹೇಳುತ್ತಾ ಬೆನ್ನು ತಟ್ಟುತ್ತಿರುವ ಟ್ರಂಪ್ ಅಸಲಿಯತ್ತು ಬಯಲಾಗಿದೆ.
ಇನ್ನು ಹಾಗೆಯೇ ಭಾರತ ಹಾಗೂ ಪಾಕಿಸ್ತಾನ ನಡುವಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಎರಡು ಪರಮಾಣು ಹೊಂದಿರುವ ನೆರೆಹೊರೆಯ ದೇಶಗಳು ಶಾಂತಿಯುತ ಪರಿಹಾರ ಕೈಗೊಳ್ಳುವುದನ್ನು ಅಮೆರಿಕಾ ಬಯಸುತ್ತದೆ ಎಂದು ಅವರು ಟ್ವಿಟ್ ಮಾಡಿದ್ದಾರೆ.
Comments are closed.