Bengaluru: ಮಹಾನಿರ್ದೇಶಕರ ಸೇವಾವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ!

Share the Article

Bengaluru : ಪೊಲೀಸ್‌ ಮಹಾನಿರ್ದೇಶಕರ ಸೇವಾವಧಿಯನ್ನು ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.

ಇಂದು ವಯೋ ನಿವೃತ್ತಿಯಾಗಬೇಕಿದ್ದ ಪೊಲೀಸ್‌ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರ ಸೇವಾವಧಿ ಮೇ.21ರವರೆಗೆ ಸರ್ಕಾರ ವಿಸ್ತರಿಸಿದೆ. 2023ರ ಮೇ 21ರಂದು ಡಿಜಿ-ಐಜಿಪಿಯಾಗಿ ಅಲೋಕ್ ಮೋಹನ್ ಅವರು ಅಧಿಕಾರ ಸ್ವೀಕರಿಸಿದ್ದರು. ಎರಡು ವರ್ಷಗಳ ಸೇವಾವಧಿ ಪೂರೈಸಲು ಮುಂದುವರಿಕೆ ಮಾಡಲಾಗಿದ್ದು, ಮೇ21ರವರೆಗೆ ಸೇವಾವಧಿ ವಿಸ್ತರಿಸಲಾಗಿದೆ. ಇನ್ನು ಸೇವಾವಧಿ ಮುಗಿದ ಬಳಿಕ ನೂತನ ಡಿಜಿ-ಐಜಿಪಿ ನೇಮಕವಾಗಲಿದೆ.

Comments are closed.